ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ರಾಜಕೀಯ ಪ್ರೇರಿತ. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಿದ್ದೇವೆ. ಆಕ್ಷೇಪಣೆಗಳನ್ನು ನೋಡಿಕೊಂಡು ಏನು ಸರಿಪಡಿಸಬೇಕೋ ಅದನ್ನು ಮಾಡ್ತೇವೆ. ವಿಪಕ್ಷದವರು ಕೇವಲ ರಾಜಕೀಯ ಆರೋಪಗಳು ಮಾಡುತ್ತಿದ್ದಾರೆ ಅಷ್ಟೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ವಾರ್ಡ್ ಮರುವಿಂಗಡಣೆ ಕುರಿತ ವಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರು.
ಇದೇ ವೇಳೆ ಮಾತನಾಡಿದ ಸಂಸದ ಪಿ.ಸಿ ಮೋಹನ್, ಚುನಾವಣೆ ನಡೆದರೆ 243 ವಾರ್ಡ್ ಪೈಕಿ 150ಕ್ಕೂ ಹೆಚ್ಚು ಗೆಲ್ಲುತ್ತೇವೆ. ಉಪನಗರ ರೈಲ್ವೆ ಯೋಜನೆ, ವಿಮಾನ ನಿಲ್ದಾಣವರೆಗೆ ಮೆಟ್ರೋ ವಿಸ್ತರಣೆ ಆಗುತ್ತಿದೆ. ಯಾವ ವಾರ್ಡಿಗೆ ಹೆಚ್ಚು ಜಾಗ ಇರುತ್ತೋ ಅದರ ಹೆಸರಿಡಲಾಗುತ್ತದೆ. ವಾರ್ಡ್ಗಳ ಹೆಸರು ಬದಲಾವಣೆಗೆ ಆಕ್ಷೇಪಣೆ ಇದ್ದರೆ ಸರಿಪಡಿಸಲಾಗುತ್ತೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತೆ. ಚಾಣಕ್ಯ ಬಗ್ಗೆ ಯುವಕರು ತುಂಬಾ ತಿಳಿದುಕೊಳ್ಳಬೇಕು. ಅದಕ್ಕೆ ವಾರ್ಡ್ವೊಂದಕ್ಕೆ ಚಾಣಕ್ಯ ಹೆಸರಿಡಲು ಚಿಂತಿಸಿದ್ದಾರೆ ಎಂದರು.