ಕರ್ನಾಟಕ

karnataka

ETV Bharat / city

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ... ಹೀಗಿರುತ್ತೆ ಸಿಎಂ ಇಂದಿನ ದಿನಚರಿ

ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಇಂದು ಚೊಚ್ಚಲ ಬಜೆಟ್ ಮಂಡನೆ. 2022-23ನೇ ಸಾಲಿನ ಆಯವ್ಯಯವನ್ನು ಸಿಎಂ ಇಂದು ಮಂಡಿಸಲಿದ್ದು, ಹಲವು ನಿರೀಕ್ಷೆಗಳು ಗರಿಗೆದರಿವೆ.

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್
ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್

By

Published : Mar 4, 2022, 8:01 AM IST

Updated : Mar 4, 2022, 10:58 AM IST

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಮೊದಲ ಬಜೆಟ್​ನಲ್ಲಿ ಬೊಮ್ಮಾಯಿ ಯಾರಿಗೆ ಏನು ಕೊಡುತ್ತಾರೆ ಎಂಬ ಕುತೂಹಲ ಮೂಡಿದೆ.

ಇಂದು ಮಧ್ಯಾಹ್ನ 12.30 ರಿಂದ ಸಿಎಂ ವಿಧಾನಸಭೆಯಲ್ಲಿ 2022-23ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಬಜೆಟ್​ಗೆ ಅನುಮೋದನೆ ನೀಡಲು 12.10ಕ್ಕೆ ಸಚಿವ ಸಂಪುಟ ವಿಶೇಷ ಸಭೆ ನಡೆಯಲಿದೆ. ಬಜೆಟ್​ಗೂ ಮುನ್ನ ಸಿಎಂ ದೇವಾಲಯಕ್ಕೆ ತೆರಳಿ, ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ಆಯವ್ಯಯ ಪ್ರತಿ ಸ್ವೀಕರಿಸಿ ಬಜೆಟ್ ಮಂಡನೆಗೆ ಸಿಎಂ ತೆರಳಲಿದ್ದಾರೆ.

ಬಜೆಟ್ ಬಳಿ ಸಾಯಂಕಾಲ 4ಗಂಟೆಗೆ ಸಿಎಂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ. ಹಾಗೆಯೇ ಇದೇ ವೇಳೆ 12.30ರಿಂದ ವಿಧಾನಪರಿಷತ್ ಕಲಾಪಗಳು ಕೂಡ ಆರಂಭವಾಗಲಿವೆ.

ಸಿಎಂ ಕಾರ್ಯಕಲಾಪಗಳು

(ಇದನ್ನೂ ಓದಿ: ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಟಾಪ್ 5 ಹಣಕಾಸು ಸಚಿವರು/ಸಿಎಂಗಳು ಯಾರು?)

Last Updated : Mar 4, 2022, 10:58 AM IST

ABOUT THE AUTHOR

...view details