ಬೆಂಗಳೂರು:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಗಡುವು ನೀಡಿರುವ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು.
ಮಂಗಳವಾರ ಸಂಜೆ ಶ್ರೀಗಳ ಭೇಟಿ ಮಾಡಿದ ಸಿಎಂ ಆಶೀರ್ವಾದ ಪಡೆದು, ಕೆಲಕಾಲ ಮಾತುಕತೆ ನಡೆಸಿದರು. 2ಎ ಮೀಸಲಾತಿ ಕುರಿತು ಶ್ರೀಗಳು ಸಿಎಂ ಗಮನ ಸೆಳೆದರು. ಯಡಿಯೂರಪ್ಪ ನೀಡಿದ್ದ ಭರವಸೆಯನ್ನು ನೆನಪಿಸಿದರು.
ಬಳಿಕ ಶ್ರೀಗಳು ಬೊಮ್ಮಾಯಿ ಅವರಿಗೆ ಪಂಚಮಸಾಲಿ ಪೀಠದ ಪಂಚಲಾಂಛನಗಳನ್ನು (ಹಸಿರು ಶಾಲು, ವಚನ ಪುಸ್ತಕ, ಉತ್ತರ ಗಾಂಧಿ ಟೋಪಿ ವೀರರಾಣಿ ಕಿತ್ತೂರು ಚೆನ್ನಮ್ಮನ ಭಾವಚಿತ್ರ ಮತ್ತು ರುದ್ರಾಕ್ಷಿ ಮಾಲೆ) ನೀಡುವ ಮೂಲಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ ಹಾಗೂ ಜೆ.ಪಿ.ನಗರದ ಮಾಜಿ ಕಾರ್ಪೋರೇಟರ್ ಬಿ.ಎಸ್.ನಟರಾಜ ಹಾಜರಿದ್ದರು.
ಇದನ್ನೂ ಓದಿ:ನನ್ನ ಕೊಂದರೂ ಸರಿ ಆಫ್ಘನ್ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ