ಕರ್ನಾಟಕ

karnataka

By

Published : Feb 27, 2022, 10:34 AM IST

ETV Bharat / city

ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ರಾಷ್ಟ್ರೀಯ ಲಸಿಕಾ ದಿನಾಚರಣೆ ಅಂಗವಾಗಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಪಲ್ಸ್ ಪೋಲಿಯೊ ಲಸಿಕೆ
ಪಲ್ಸ್ ಪೋಲಿಯೊ ಲಸಿಕೆ

ಬೆಂಗಳೂರು: ಇಂದು ರಾಷ್ಟ್ರೀಯ ಲಸಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಮಕ್ಕಳಿಗೆ ಪೋಲಿಯೋ ಹಾನಿ ಹಾಕುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಆರೋಗ್ಯ ಸಚಿವ ಡಾ.ಸುಧಾಕರ್, ಶ್ವಾಸಗುರು ವಚನಾನಂದ ಸ್ವಾಮೀಜಿ ಇದ್ದರು.

ಪೋಲಿಯೊ ಸೋಂಕು 5 ವರ್ಷದೊಳಗಿನ ಮಕ್ಕಳಲ್ಲಿ ತೀವ್ರತರವಾದ ಅಸ್ವಸ್ಥತೆ ಮತ್ತು ಪಾರ್ಶ್ವವಾಯು ಉಂಟು ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಲಸಿಕೆ ಹಾಕಿಸುವುದು ಅನಿವಾರ್ಯ. ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ರಾಷ್ಟ್ರಾದ್ಯಂತ ಎಲ್ಲ ಆಸ್ಪತ್ರೆಯಲ್ಲೂ ಲಸಿಕೆ ಹಾಕಲಾಗುತ್ತೆ. 1988ರಲ್ಲಿ ಪ್ರತಿ ವರ್ಷ 3 ಲಕ್ಷಕ್ಕೂ ಹೆಚ್ಚು ಮಕ್ಕಳು ಬಹುತೇಕ ರಾಷ್ಟ್ರಗಳಲ್ಲಿ ಪೋಲಿಯೊ ಸೋಂಕಿನಿಂದ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದರು. ಆದ್ರೆ ಸದ್ಯ ಈಗ 2 ರಾಷ್ಟ್ರಗಳಲ್ಲಿ ಮಾತ್ರ ಪೋಲಿಯೊ ಪ್ರಕರಣಗಳು ವರದಿಯಾಗುತ್ತಿವೆ. ಭಾರತವು ಪೋಲಿಯೊ ಮುಕ್ತ ರಾಷ್ಟ್ರ ಎಂಬ ಬಿರುದನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ 2014 ರಲ್ಲಿ ಪಡೆದುಕೊಂಡಿದೆ.

ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ವಿವರ ಹೀಗಿದೆ:

  • 0-5 ವರ್ಷ - 64,77,102 ಮಕ್ಕಳಿಗೆ ಲಸಿಕೆ ಹಾಕುವ ಗುರಿ
  • ಬೂತ್‌ಗಳ ಸಂಖ್ಯೆ - 33, 223
  • ಮನೆ ಮನೆ ಭೇಟಿ ತಂಡಗಳ ಸಂಖ್ಯೆ : 45,933
  • ಸಂಚಾರಿ ತಂಡ: 960
  • ಟ್ರಾನ್ಸಿಟ್ ತಂಡ: 1942
  • ಲಸಿಕಾ ಕಾರ್ಯಕರ್ತರು: 1,08,881
  • ಮೇಲ್ವಿಚಾರಕರು: 7,138

ಇದನ್ನೂ ಓದಿ: ರೊಮೇನಿಯಾ ಗಡಿಯಲ್ಲಿ 5 ಸಾವಿರ ಭಾರತೀಯರು: ವಿದ್ಯಾರ್ಥಿಗಳ ಅಳಲು

ಬೆಂಗಳೂರಲ್ಲಿ 10 ಲಕ್ಷ ಮಕ್ಕಳಿಕೆಗೆ ಲಸಿಕೆ:

ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ

3,400 ಬೂತ್​ ಮೂಲಕ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುತ್ತದೆ. 10 ಲಕ್ಷ 84 ಸಾವಿರ ಮಕ್ಕಳು ನಗರದಲ್ಲಿದ್ದಾರೆ. ಮೊಬೈಲ್ ಮತ್ತು ಫಿಕ್ಸ್ ಬೂತ್​ಗಳಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾನುವಾರದಿಂದ ಮಾರ್ಚ್ 02 ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಅಭಿಯಾನ ಚಾಲನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಾಲಿಕೆ ಮುಖ್ಯ ಕಚೇರಿ ವ್ಯಾಪ್ತಿಯ ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತ ಪಾಲಿಕೆ ಮುಖ್ಯ ಕಚೇರಿ ಬಳಿಯ ದಾಸಪ್ಪ ಆಸ್ಪತ್ರೆಯ ಆವರಣದಲ್ಲಿ ಮಕ್ಕಳಿಗೆ 2 ಹನಿ ಪಲ್ಸ್ ಪೋಲಿಯೊ ಹಾಕುವ ಮೂಲಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೌರವ್ ಗುಪ್ತ, ರೈಲ್ವೆ ನಿಲ್ದಾಣ ಸೇರಿದಂತೆ ರಾಜಧಾನಿಯ ಹಲವೆಡೆ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ನೋಡಲ್ ಆಫೀಸರ್ ಒಬ್ಬರನ್ನು ನೇಮಕ ಮಾಡಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಹಾಗೂ ಇನ್ನಿತರ ಅಧಿಕಾರಿಗಳು. ಇದ್ದರು.

ABOUT THE AUTHOR

...view details