ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಕುಟುಂಬಸಮೇತರಾಗಿ ತಮ್ಮ ಒಡೆತನದ ಕಾರ್ಖಾನೆಗೆ ಭೇಟಿ ನೀಡಿ, ಆಯುಧ ಪೂಜೆಯಲ್ಲಿ ಪಾಲ್ಗೊಂಡರು.
ತಮ್ಮ ಕಾರ್ಖಾನೆಯ ಆಯುಧ ಪೂಜೆಯಲ್ಲಿ ಭಾಗಿಯಾಗಿ ಸಿಬ್ಬಂದಿಗೆ ಬೋನಸ್ ನೀಡಿದ ಸಿಎಂ ಬೊಮ್ಮಾಯಿ - ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿ
ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಒಡೆತನದ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ತೆರಳಿ ಆಯುಧ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ಕುಟುಂಬಸಮೇತ ತೆರಳಿ ಪೂಜೆ ಸಲ್ಲಿಸಿದ ಸಿಎಂ, ನಂತರ ಉದ್ಯೋಗಿಗಳ ಜೊತೆ ಕಾಲ ಕಳೆದು ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿ ಬೋನಸ್ ನೀಡಿದರು.