ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ನಿಧನರಾದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ ಪಡೆದರು.
ಶಿವರಾಮಣ್ಣನ ಅಂತಿಮ ದರ್ಶನ ಪಡೆದ ಸಿಎಂ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಹಿರಿಯ ನಟನ ಅಂತ್ಯಕ್ರಿಯೆ - ಹಿರಿಯ ನಟ ಶಿವರಾಮ್ ನಿಧನ
ಚಂದನವನದ ಹಿರಿಯ ನಟ, ನಿರ್ಮಾಪಕ ಶಿವರಾಮ್ ನಿಧನ ಹಿನ್ನೆಲೆ ಸಿಎಂ ಬೊಮ್ಮಾಯಿ ಅಂತಿಮ ದರ್ಶನ ಪಡೆದರು. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ತಿಳಿಸಿದರು.
![ಶಿವರಾಮಣ್ಣನ ಅಂತಿಮ ದರ್ಶನ ಪಡೆದ ಸಿಎಂ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಹಿರಿಯ ನಟನ ಅಂತ್ಯಕ್ರಿಯೆ cm-basavaraj-bommai](https://etvbharatimages.akamaized.net/etvbharat/prod-images/768-512-13816748-thumbnail-3x2-shi9ram.jpg)
ಸಿಎಂ ಬೊಮ್ಮಾಯಿ
ಶಿವರಾಮಣ್ಣನ ಅಂತಿಮ ದರ್ಶನ ಪಡೆದ ಸಿಎಂ
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಶಿವರಾಮಣ್ಣ ಅಜರಾಮರ, ಅವರ ಚಿತ್ರಗಳು ಅತ್ಯಂತ ಯಶಸ್ವಿಯಾಗಿದ್ದವು. ಅವರ ಜೀವನ ಕೇವಲ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಶಿವರಾಮ್ ಅವರನ್ನ ನೋಡಿದ್ರೆ ಗುರುಗಳನ್ನ, ಸ್ವಾಮೀಜಿಗಳನ್ನ ನೋಡಿದಂತೆ ಆಗುತ್ತಿತ್ತು. ಅವರ ಮೇಲೆ ಅಪಾರ ಗೌರವಿದೆ ಎಂದರು.
ನಟ ಶಿವರಾಮ್ ಅಂತ್ಯಕ್ರಿಯೆ : ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೇರವೇರಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು.
Last Updated : Dec 4, 2021, 6:58 PM IST