ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಏರಿಯಲ್ ಸರ್ವೆ ಮಾಡಲಿದ್ದಾರೆ.
ಇಂದು ಸಿಎಂ ಬಿಎಸ್ವೈ ಮತ್ತೆ ಬೆಳಗಾವಿಗೆ... ಶಾ ಜೊತೆ ಏರಿಯಲ್ ಸರ್ವೆಯಲ್ಲಿ ಭಾಗಿ - ಬೆಂಗಳೂರು
ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬರುತ್ತಾರೆ. ಅವರೊಂದಿಗೆ ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ಏರಿಯಲ್ ಸರ್ವೆ ಮಾಡಿ, ಅಲ್ಲಿನ ಜನರ ಅಹವಾಲು ಸ್ವೀಕರಿಸಲಿದ್ದಾರೆ. ನಂತರ ಅಮಿತ್ ಶಾ ಜೊತೆಗೆ ದೆಹಲಿಗೆ ತೆರಳುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಸಿಎಂ ಬಿಎಸ್ವೈ ಬೆಳಗಾವಿಗೆ
ನಗರದ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಮಾತನಾಡಿದ ಅವರು, ನಾನು ಇಲ್ಲಿಂದ ನೇರವಾಗಿ ಹಲಸೂರು ಬಳಿ ಇರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಬೆಳಗಾವಿಗೆ ತೆರಳುತ್ತೇನೆ ಎಂದು ತಿಳಿಸಿದರು.
ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬರುತ್ತಾರೆ. ಅವರೊಂದಿಗೆ ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ಏರಿಯಲ್ ಸರ್ವೆ ಮಾಡಿ, ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸುತ್ತೇವೆ. ನಂತರ ಅಮಿತ್ ಶಾ ಜೊತೆಗೆ ದೆಹಲಿಗೆ ತೆರಳಿದ ಬಳಿಕ ಬೆಂಗಳೂರಿಗೆ ಮರಳುವುದಾಗಿ ಯಡಿಯೂರಪ್ಪ ಹೇಳಿದ್ರು.