ಕರ್ನಾಟಕ

karnataka

ETV Bharat / city

ಪ್ರವಾಹ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಮಾಜಿ ಹೋಮ್​ ಮಿಸಿಸ್ಟರ್​ ಒತ್ತಾಯ - ಪ್ರವಾಹ ಪರಿಸ್ಥಿತಿ

ರಾಜ್ಯದಲ್ಲಾಗಿರುವ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಅಂತ ಘೋಷಿಸಬೇಕು. ರಾಜ್ಯದಲ್ಲಿ ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಸರ್ಕಾರ ಅತಿ ಕಾಳಜಿಯಿಂದ, ಬದ್ಧತೆಯಿಂದ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಆಗ್ರಹಿಸಿದರು.

ಎಂ.ಬಿ ಪಾಟೀಲ್

By

Published : Aug 24, 2019, 3:43 PM IST

Updated : Aug 24, 2019, 6:55 PM IST

ಬೆಂಗಳೂರು: ರಾಜ್ಯದಲ್ಲಾಗಿರುವ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಅಂತ ಘೋಷಿಸಬೇಕು ಎಂದು‌ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಆಗ್ರಹಿಸಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್

ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಸತೀಶ್ ಜಾರಕಿಹೊಳಿ, ಶಾಸಕರಾದ ಆನಂದ್ ನ್ಯಾಮೇಗೌಡರು, ಗಣೇಶ್ ಹುಕ್ಕೇರಿ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗಿ ಬೃಹತ್ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಸರ್ಕಾರ ಅತಿ ಕಾಳಜಿಯಿಂದ, ಬದ್ಧತೆಯಿಂದ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ. ಒಂದು ವೇಳೆ ಸರ್ಕಾರ ಎಡವಿದರೆ ನಾವು ಹೋರಾಟ ಮಾಡಬೇಕಾಗುತ್ತದೆ. ಈಗ ಯಾವುದೇ ರಾಜಕೀಯ ಮಾಡುವುದಿಲ್ಲ. ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿ ಎಂದು ಮನವಿ ಮಾಡಿದರು.

ಸಿಎಂ 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಹೆಚ್ಚಿನ ಹಣ ಕೇಂದ್ರದಿಂದ ಪಡೆಯಬೇಕಾಗಿದೆ. ಈ ಅತಿವೃಷ್ಠಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಜತೆಗೆ ಸಿಎಂ ಒಂದು ವಾರದ ವಿಶೇಷ ಅಧಿವೇಶನ ಕರೆದು, ಅತಿವೃಷ್ಠಿ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಇಲ್ಲಿವರೆಗೆ ಪ್ರವಾಹ ಸಂಬಂಧ ಕೇಂದ್ರದಿಂದ ಹಣ ಬಂದಿಲ್ಲ. ಕೇಂದ್ರ ಸರ್ಕಾರ ಮೊನ್ನೆ ಬರ ಪರಿಹಾರ ನೀಡಿದೆ. ಆದರೆ, ನೆರೆ ಸಂಬಂಧ ಪರಿಹಾರ ಇನ್ನೂ ‌ನೀಡಿಲ್ಲ. ಈ ಸಂಬಂಧ ಜನರನ್ನು ತಪ್ಪು ದಾರಿಗೆ ಎಳೆಯ ಬಾರದು ಎಂದು ಬಿಜೆಪಿ ಸಚಿವರುಗಳಿಗೆ ಎಂ.ಬಿ ಪಾಟೀಲ್ ಟಾಂಗ್ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಸಂಬಂಧ ಮನವಿ ಪತ್ರ ಸಿದ್ಧಪಡಿಸಿದ್ದು, ಜನರ ಬೇಡಿಕೆಗಳನ್ನೊಳಗೊಂಡ ಈ ಮನವಿ ಪತ್ರವನ್ನು ನಾವು ಸಿಎಂ ಭೇಟಿಯಾಗಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ನಿಯೋಗದ ಮನವಿ ಏನು?:

1.ಮನೆ ಕಳೆದುಕೊಂಡ ಸಂತ್ರಸ್ತರಿಗೆ ಐದು ಲಕ್ಷದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಆ ಮೊತ್ತವನ್ನು 10 ಲಕ್ಷ ರೂ‌.ಗೆ ಏರಿಕೆ ಮಾಡಬೇಕು.

2. ಭಾಗಶಃ ಹಾನಿಗೊಳಗಾದ ಮಣ್ಣಿನ ಮನೆಗಳ‌ ಮಾಲೀಕರಿಗೆ ಹೊಸ‌‌ಮನೆ ನಿರ್ಮಿಸಲು ಹತ್ತು ಲಕ್ಷ ರೂ.ನೀಡಬೇಕು

3. ಮನೆ ಕಳಕೊಂಡವರಿಗೆ ಕನಿಷ್ಠ 18/16 ಗಾತ್ರದ ತಾತ್ಕಾಲಿಕ ಶೆಡ್ ಮಾಡಿಕೊಡಬೇಕು. ಶೌಚಾಲಯ, ಸ್ನಾನಗೃಹ, ಕುಡಿವ ನೀರಿನ ವ್ಯವಸ್ಥೆ ಮಾಡಬೇಕು.

4. ನಿರಾಶ್ರಿತರ ಹೊದಿಕೆ, ಪಠ್ಯ, ಪುಸ್ತಕಗಳು, ಪಾತ್ರೆ ಸಾಮಾನುಗಳನ್ನು, ಬಟ್ಟೆ ಕೊಡಲು ಒಂದು ಲಕ್ಷ ಪರಿಹಾರ ನೀಡಬೇಕು

5. ಎಮ್ಮೆ, ಎತ್ತು, ಆಕಳು ಕಳಕೊಂಡವರಿಗೆ 50 ಸಾವಿರ ರೂ. ನೀಡಬೇಕು. ಮೇಕೆ, ಆಡು ಕಳೆದುಕೊಂಡವರಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ನೀಡಬೇಕು.

6. ರೈತರು ಸರಾಸರಿ 40 ಟನ್ ಕಬ್ಬು ಬೆಳೆಯುತ್ತಾನೆ. ಆ ಮಾನದಂಡದಲ್ಲಿ ಒಂದು ಲಕ್ಷ ರೂ. ಪರಿಹಾರ ನೀಡಬೇಕು.

7. ಸಾಕಷ್ಟು ರಸ್ತೆ, ಚೆಕ್ ಡ್ಯಾಂ, ಕೆರೆ ಕಟ್ಟೆಗಳು, ಸೇತುವೆ, ಪಂಪ್ ಸೆಟ್ ಹಾನಿಯಾಗಿದ್ದು, ಅದಕ್ಕೆ ಪರಿಹಾರ ನೀಡಬೇಕು.

8. ಹೊಲ ಮನೆ ಹಾನಿಯಿಂದ ನಿರಾಶ್ರಿತರಾದವರಿಗೆ ನರೇಗಾ ಸೇರಿದಂತೆ ಇತರ ಉದ್ಯೋಗ ಸೃಷ್ಟಿ ಮಾಡಿ, ಒಂದು ವರ್ಷವಾದರೂ ಅವರಿಗೆ ಕನಿಷ್ಠ ಕೂಲಿ ವ್ಯವಸ್ಥೆ ಮಾಡಬೇಕು.

9. ಆಲಮಟ್ಟಿ ಅಣೆಕಟ್ಟಿನ ಪುನರ್ವಸತಿ ಕೇಂದ್ರಕ್ಕೆ ಶೇ 90 ‌ ಜನರು ಹೋಗಿಲ್ಲ. 1994ರಲ್ಲಿ ಅವರಿಗೆ 24 ಸಾವಿರ ರೂ. ದಂತೆ ಮನೆ ಕಟ್ಟಲು ನೀಡಲಾಗಿತ್ತು. ಹೀಗಾಗಿ ಸ್ಥಳಾಂತರಗೊಳ್ಳದವರಿಗೆ ಮನೆ ಕಟ್ಟಲು ಐದು ಹಾಗೂ ಹತ್ತು ಲಕ್ಷ ರೂ. ನೀಡಬೇಕು.

10. ಹಳೆ ಗೋಕಾಕ್ ಪಟ್ಣಣ ಸಂಪೂರ್ಣ ಹಾನಿಯಾಗಿದೆ. ಅವರನ್ನು ಸ್ಥಳಾಂತರಿಸಬೇಕಾಗಿದೆ. ಸರ್ಕಾರಿ ಜಾಗ ಎಲ್ಲಿ ಇಲ್ಲ ಅಲ್ಲಿ‌ ನೀವು ನೇರ ಖರೀದಿ ಮೇರೆಗೆ ಪುನರ್ವಸತಿ ಕೇಂದ್ರಕ್ಕೆ ಭೂಮಿ ಖರೀದಿಸಬೇಕು.

11. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಏಕೆಂದರೆ 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ ಎಂದು ಸಿಎಂ ಹೇಳಿದ್ದಾರೆ. ಹಾಗಾಗಿ ಹೆಚ್ಚಿನ ಹಣ ಕೇಂದ್ರದಿಂದ ಪಡೆಯಬೇಕಾಗಿದೆ.

12.ಸಿಎಂ ಒಂದು ವಾರದ ವಿಶೇಷ ಅಧಿವೇಶನ ಕರೆದು, ಅತಿವೃಷ್ಠಿ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು. ಜೊತೆಗೆ ಹಾನಿಯ ಸಮೀಕ್ಷೆಯನ್ನು ನಿಖರವಾಗಿ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Last Updated : Aug 24, 2019, 6:55 PM IST

ABOUT THE AUTHOR

...view details