ಬೆಂಗಳೂರು:ಇಂದಿರಾನಗರದ ವಾಚ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು 2 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚುಗಳನ್ನು ಕದ್ದೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಾಜಿನಗರದ ಫ್ರೆಜರ್ ಟೌನ್ ನಿವಾಸಿ ಶಾಮೋಯಿಲ್ ಕೊಟ್ಟ ದೂರಿನ ಆಧಾರದ ಮೇರೆಗೆ ಇಂದಿರಾನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶಾಮೋಯಿಲ್ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಜಿಮ್ಸ್ ಟೈಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ವಾಚ್ ಶೋರೂಂ ಹೊಂದಿದ್ದಾರೆ. ಜನವರಿ 4ರಂದು ಶೋರೂಂನ್ನು ಮುಚ್ಚಿ ಹೋಗಿದ್ದರು. ಮರುದಿನ ಬೆಳಗ್ಗೆ 9 ಗಂಟೆಗೆ ಶೋರೂಂನ ಕಟ್ಟಡ ಮಾಲೀಕರು ಶಾಮೋಯಿಲ್‌ಗೆ ಕರೆ ಮಾಡಿ ನಿಮ್ಮ ಶೋರೂಂ ಡೋರ್ ಒಡೆದು ಹಾಕಲಾಗಿದೆ. ಏನಾದರೂ ಕಳ್ಳತನವಾಗಿರಬಹುದು ಎಂದು ಹೇಳಿದ್ದರು.