ಕರ್ನಾಟಕ

karnataka

ETV Bharat / city

ಮೆಟ್ರೋ ಕಾಮಗಾರಿಗೆ ಮರಗಳ ತೆರವು: ಜಿಕೆವಿಕೆ ತಜ್ಞರ ಸಮಿತಿ ನೇಮಕಕ್ಕೆ ಹೈಕೋರ್ಟ್​ ಆದೇಶ - ಹೈಕೋರ್ಟ್ ತಜ್ಞರ ಸಮಿತಿ

ತೆರವು ಮಾಡಲು ಉದ್ದೇಶಿಸಿರುವ 59 ಮರಗಳ ಪೈಕಿ ಎಷ್ಟು ಮರಗಳನ್ನು ಉಳಿಸಬಹುದು ಮತ್ತು ಅವುಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವ ಮಾರ್ಗೋಪಾಯಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ಸಮಿತಿಯ ಕಾರ್ಯನಿರ್ವಹಣೆಗೆ ತಗಲುವ ಖರ್ಚು-ವೆಚ್ಚವನ್ನು ಸಂಪೂರ್ಣವಾಗಿ ಬಿಎಂಆರ್​ಸಿಎಲ್ ಭರಿಸಬೇಕು ಎಂದು ತಿಳಿಸಿದೆ.

Clearing of trees for metro work
Clearing of trees for metro work

By

Published : Jul 2, 2020, 10:32 PM IST

ಬೆಂಗಳೂರು: ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ‌ ಅಡ್ಡಿಯಾಗಿವೆ ಎನ್ನಲಾದ ಮರಗಳನ್ನು ತೆರವು ಮಾಡುವ ಹಾಗೂ ಸ್ಥಳಾಂತರಿಸುವ ಪ್ರಕ್ರಿಯೆಯ ವಸ್ತುಸ್ಥಿತಿಯನ್ನು ಪರಿಶೀಲಿಸಲು ಜಿಕೆವಿಕೆಯ ಅರಣ್ಯ ವಿಭಾಗವನ್ನು ತಜ್ಞ ಸಂಸ್ಥೆಯಾಗಿ ನೇಮಕ‌ ಮಾಡಲು ಹೈಕೋರ್ಟ್ ಆದೇಶಿಸಿದೆ.

ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ಬಲಿ ಕೊಡುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರು ಎನ್ವಿರಾನ್‍ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ‌ ಈ ಆದೇಶ ನೀಡಿದೆ.

ಮುಂದಿನ ಮೂರು ವಾರಗಳಲ್ಲಿ ಜಿಕೆವಿಕೆ ಕುಲಪತಿ ತಮ್ಮ ಸಂಸ್ಥೆಯ ಅರಣ್ಯ ವಿಭಾಗದಲ್ಲಿರುವ ತಜ್ಞರನ್ನು ಸೇರಿಸಿ ಸಮಿತಿ ರಚಿಸಬೇಕು‌. ಆ ಸಮಿತಿಯು ಈಗಾಗಲೇ ಮರಗಳನ್ನು‌ ತೆರವು ಮಾಡಿರುವ ಪ್ರಕ್ರಿಯೆ ವೈಜ್ಞಾನಿಕ ರೀತಿಯಲ್ಲಿ ನಡೆದಿದೆಯೆ? ಸ್ಥಳಾಂತರಿಸಿರುವ ಮರಗಳ ಬೆಳವಣಿಗೆ ಹೇಗಿದೆ? ಎಂಬುದನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ.

ಅಲ್ಲದೆ ತೆರವು ಮಾಡಲು ಉದ್ದೇಶಿಸಿರುವ 59 ಮರಗಳ ಪೈಕಿ ಎಷ್ಟು ಮರಗಳನ್ನು ಉಳಿಸಬಹುದು ಮತ್ತು ಅವುಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವ ಮಾರ್ಗೋಪಾಯಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ಸಮಿತಿಯ ಕಾರ್ಯನಿರ್ವಹಣೆಗೆ ತಗಲುವ ಖರ್ಚು-ವೆಚ್ಚವನ್ನು ಸಂಪೂರ್ಣವಾಗಿ ಬಿಎಂಆರ್​ಸಿಎಲ್ ಭರಿಸಬೇಕು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗಾಗಿ ನಗರದ ಹಲವಡೆ ಮರಗಳನ್ನು ಕತ್ತರಿಸುವ ಮತ್ತು ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ತಜ್ಞರ ಸಮಿತಿ ರಚಿಸಿತ್ತು. ಆದರೆ ಹಿಂದಿ‌ನ ತಜ್ಞರ ಸಮಿತಿ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಇಂದು ಹೊಸದಾಗಿ ಜಿಕೆವಿಕೆ ಅರಣ್ಯ ವಿಭಾಗವನ್ನು ತಜ್ಞ ಸಂಸ್ಥೆಯಾಗಿ ನೇಮಿಸುವಂತೆ ಆದೇಶ ಹೊರಡಿಸಿದೆ.

ABOUT THE AUTHOR

...view details