ಬೆಂಗಳೂರು:2018ನೇ ಸಾಲಿನಲ್ಲಿ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿರುವ ಕನ್ನಡದ 'ನಾತಿಚರಾಮಿ' ಚಲನಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಬಾರದು ಎಂದು ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ನೀಡಿದೆ.
ನಾತಿಚರಾಮಿ ಚಲನಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡದಂತೆ ಕೋರ್ಟ್ ಆದೇಶ - ನ್ಯಾಯಾಧೀಶ ಸಿ.ಡಿ.ಕರೋಷಿ ವಿಚಾರಣೆ
ಕನ್ನಡದ ನಾತಿಚರಾಮಿ ಚಲನಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಬಾರದು ಎಂದು ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ನೀಡಿದೆ.
![ನಾತಿಚರಾಮಿ ಚಲನಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡದಂತೆ ಕೋರ್ಟ್ ಆದೇಶ Naticharami Movie](https://etvbharatimages.akamaized.net/etvbharat/prod-images/768-512-5442633-thumbnail-3x2-film.jpg)
ಹೈಕೋರ್ಟ್
5ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಈ ಸಿನಿಮಾಗೆ ಪ್ರಶಸ್ತಿ ಘೋಷಿಸಿದ್ದನ್ನು ಪ್ರಶ್ನಿಸಿ ಸಿನಿಮಾ ನಿರ್ದೇಶಕ ದಯಾಳ್ ಪದ್ಮನಾಭನ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿ.ಡಿ.ಕರೋಷಿ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.
ಮೊದಲನೇ ಪ್ರತಿವಾದಿ 'ನಾತಿಚರಾಮಿ' ಚಿತ್ರ ನಿರ್ಮಿಸಿರುವ ತೇಜಸ್ವಿನಿ ಎಂಟರ್ಪ್ರೈಸಸ್ಗೆ ಪ್ರಶಸ್ತಿ ನೀಡಬಾರದು ಎಂದು ಆದೇಶಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು 2020ರ ಜನವರಿ 10ಕ್ಕೆ ಮುಂದೂಡಿದ್ದಾರೆ. ಪ್ರಶಸ್ತಿಗಳನ್ನು ಇದೇ 23ರಂದು ನೀಡಬೇಕಾಗಿತ್ತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿದರು.
Last Updated : Dec 21, 2019, 1:26 AM IST