ಕರ್ನಾಟಕ

karnataka

ETV Bharat / city

ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ : ಪ್ರತಿಭಟನೆ ವಾಪಸ್​ - ಪ್ರತಿಭಟನೆ ಹಿಂಪಡೆದ ಪೌರ ಕಾರ್ಮಿಕರು

ಪೌರ ಕಾರ್ಮಿಕರ ಬೇಡಿಕೆಗೆ ಸ್ಪಂದನೆ- ಸರ್ಕಾರ ಲಿಖಿತ ರೂಪದಲ್ಲಿ ಸಿಕ್ಕ ಭರಸವೆ ಪತ್ರ- ಪ್ರತಿಭಟನೆ ವಾಪಸ್​

Civic workers protest
ಪೌರ ಕಾರ್ಮಿಕರಿಗೆ

By

Published : Jul 4, 2022, 7:29 PM IST

ಬೆಂಗಳೂರು :ಖಾಯಂ ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಮೂರು ದಿನಗಳಿಂದ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರು ಇಂದು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಪ್ರತಿಭಟನಾಕಾರರ ಬೇಡಿಕೆಗಳನ್ನ ಈಡೇರಿಸುವ ಬಗ್ಗೆ ಪತ್ರದ ಮೂಲಕ ಸರ್ಕಾರ ಭರವಸೆ ನೀಡಿದೆ. ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಸಫಾಯಿ ಕರ್ಮಚಾರಿ ನಿಯೋಗದ ಅಧ್ಯಕ್ಷ ಶಿವಣ್ಣ ಬಂದು ಭರವಸೆ ಪತ್ರ ನೀಡಿದರು.

ಬಸವರಾಜ ಬೊಮ್ಮಾಯಿ ಜುಲೈ 1ರಂದು ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಪೌರ ಕಾರ್ಮಿಕರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದರು. ನಂತರ ಸರ್ಕಾರದ ನಿರ್ಧಾರವನ್ನು ಫ್ರೀಡಂ ಪಾರ್ಕ್​ನಲ್ಲಿ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ತಲುಪಿಸುವಂತೆ ಸಚಿವ ಬೈರತಿ ಬಸವರಾಜ್ ಅವರನ್ನು ಸರ್ಕಾರದ ಪರವಾಗಿ ಕಳುಹಿಸಿದ್ದರು. ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಮುಷ್ಕರ ಕೈಬಿಡುವುದಿಲ್ಲವೆಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದರು. ಇಂದು ಲಿಖಿತ ಭರವಸೆ ಬಂದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ, ಸಿಐಡಿಗೆ ಮುಕ್ತ ಅವಕಾಶ ನೀಡಿದ್ದರಿಂದ ಅಮೃತ್ ಪೌಲ್ ಬಂಧನ: ಸಿಎಂ ಬೊಮ್ಮಾಯಿ

ABOUT THE AUTHOR

...view details