ಕರ್ನಾಟಕ

karnataka

ETV Bharat / city

ಸಿಟಿ ರೌಂಡ್ಸ್ ಮುಂದುವರೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ - ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ ನ್ಯೂಸ್​

ಕೊರೊನಾ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಟಿ ರೌಂಡ್ಸ್ ಹೊಡೆದು ಪರಿಶೀಲನೆ ನಡೆಸುತ್ತಿದ್ದು, ಇಂದು ದಕ್ಷಿಣ ವಿಭಾಗದ ತಲಘಟ್ಟಪುರದ ನೈಸ್‌ ರಸ್ತೆಯ ಭಾಗಗಳಿಗೆ ಖುದ್ದಾಗಿ ಆಗಮಿಸಿ ವಾಹನಗಳ ಪರಿಶೀಲನೆ ನಡೆಸಿದರು.

ವಾಹನ ಪರಿಶೀಲನೆ ನಡೆಸಿದ  ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​
ವಾಹನ ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​

By

Published : Apr 17, 2020, 8:25 PM IST

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರಿಗೆ ಹಾಗೂ ಬಡ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಡುತ್ತಿದ್ದಾರೆ.

ವಾಹನ ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​

ಇಂದು ವಲಸಿಗರು ವಾಸಿಸುವ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು. ಲಾಕ್‌ಡೌನ್ ಇನ್ನಷ್ಟು ಕಠಿಣಗೊಳಿಸಲಾಗಿದ್ದರಿಂದ ನಿನ್ನೆ ಬೆಂಗಳೂರು ಉತ್ತರ ವಿಭಾಗ ಮತ್ತು ಪಶ್ಚಿಮ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದರು. ಇಂದು ದಕ್ಷಿಣ ವಿಭಾಗದ ತಲಘಟ್ಟಪುರದ ನೈಸ್‌ ರಸ್ತೆಯ ಭಾಗಗಳಿಗೆ ಖುದ್ದಾಗಿ ಆಗಮಿಸಿ ವಾಹನಗಳ ಪರಿಶೀಲನೆ ನಡೆಸಿದರು.

ನಂತರ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಜ್ಯುಡಿಯಲ್ ಲೇಔಟ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಟ್ಟಡ ಕಾರ್ಮಿಕರ ಯೋಗಕ್ಷೇಮ ವಿಚಾರಿಸುವ ಮೂಲಕ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿದರು. ಮಾತ್ರವಲ್ಲದೆ ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗದ ಕಟ್ಟಡ ಕಾರ್ಮಿಕರ ಹಿತ ಕಾಯಲು ಬದ್ಧ ಎಂದು ಭರವಸೆ ನೀಡಿದರು.

For All Latest Updates

TAGGED:

ABOUT THE AUTHOR

...view details