ಕರ್ನಾಟಕ

karnataka

ETV Bharat / city

ಅಸಮರ್ಪಕ ನಿರ್ವಹಣೆ: RR ನಗರ ವಲಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನೇತೃತ್ವದ ವಲಯವಾರು ಸಭೆಯಲ್ಲಿ ಕೊರೊನಾ ನಿಯಂತ್ರಣದಲ್ಲಿ ವಿಫಲಗೊಂಡಿರುವ ರಾಜ ರಾಜೇಶ್ವರಿನಗರ ವಲಯದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Chief minister meeting with officials
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನೇತೃತ್ವದ ವಲಯವಾರು ಸಭೆ

By

Published : Jul 22, 2020, 12:10 PM IST

ಬೆಂಗಳೂರು:ರಾಜರಾಜೇಶ್ವರಿನಗರ ವಲಯದ ಕೊರೊನಾ ನಿಯಂತ್ರಣ ಕಾರ್ಯವೈಖರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನಗೊಂಡಿದ್ದು, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸಿಎಂ ನೇತೃತ್ವದಲ್ಲಿ ವಲಯವಾರು ಸಭೆ ಆರಂಭಗೊಂಡಿದೆ. ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆರ್​​ಆರ್ ನಗರ ವಲಯ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸಂಸದ ಡಿ.ಕೆ.ಸುರೇಶ್, ಸಂಯೋಜನಾಧಿಕಾರಿ ಡಾ.ವಿಶಾಲ್, ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಕೊರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಧಾನಗೊಂಡ ಸಿಎಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಇನ್ನು ಎಷ್ಟು ಸಭೆ ಮಾಡಬೇಕು ನಿಮಗೆ ಅರ್ಥ ಆಗೋದಿಲ್ಲ. ಜನ ಸಾಯುತ್ತಿದ್ದಾರೆ. ನಿಮಗೆ ಮಾನವೀಯತೆ ಅನ್ನೋದೇ ಇಲ್ವಾ. ಪ್ರತಿಯೊಂದಕ್ಕೂ ನಾನೇ ಹೇಳಬೇಕಾ? ಇನ್ಮುಂದೆ ವಲಯವಾರು ದೂರುಗಳು ಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ.

ಆರ್​​ಆರ್ ನಗರದಲ್ಲಿ ಸೋಂಕಿನ ಪ್ರಮಾಣ, ಹರಡುವಿಕೆ ಪ್ರಮಾಣ, ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕುರಿತು ಅಧಿಕಾರಿಗಳ ಜೊತೆ ಸಿಎಂ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದಾರೆ.

ABOUT THE AUTHOR

...view details