ಕರ್ನಾಟಕ

karnataka

ETV Bharat / city

ಗ್ಯಾಂಗ್ ರೇಪ್ ಅಮಾನುಷ ಕೃತ್ಯ, ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ: ಸಿಎಂ ಬಿಎಸ್​​​ವೈ

ವಿದೇಶಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಅಷ್ಟು ಮಾಹಿತಿ ಇಲ್ಲ. ಆದರೆ ಇದು ಅಮಾನುಷ ಕೃತ್ಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ
Chief Minister BS Yediyurappa

By

Published : May 28, 2021, 10:49 AM IST

Updated : May 28, 2021, 11:48 AM IST

ಬೆಂಗಳೂರು:ಗ್ಯಾಂಗ್ ರೇಪ್ ಅಮಾನುಷ ಕೃತ್ಯವಾಗಿದ್ದು, ಇದನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಈ ಕುರಿತು ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗ್ಯಾಂಗ್ ರೇಪ್ ಅಮಾನುಷ ಕೃತ್ಯ, ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ: ಸಿಎಂ ಬಿಎಸ್​​​ವೈ

ತುಮಕೂರಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ‌ ಸಿಎಂ, ವಿದೇಶಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಅಷ್ಟು ಮಾಹಿತಿ ಇಲ್ಲ. ಆದರೆ, ಇದು ಅಮಾನುಷ ಕೃತ್ಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಜಿಲ್ಲಾ ಪ್ರವಾಸ:ಇನ್ಮುಂದೆ ಪ್ರತಿ ವಾರ ಅಥವಾ ಎರಡು ವಾರಕ್ಕೊಮ್ಮೆ ಜಿಲ್ಲಾ ಪ್ರವಾಸ ನಡೆಸಿ, ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಲು ನಿರ್ಧರಿಸಿದ್ದೇನೆ. ಅದರಂತೆ ಇಂದು ತುಮಕೂರಿಗೆ ತೆರಳುತ್ತಿದ್ದು, ಅಲ್ಲಿ ಕೊವೀಡ್ ಸ್ಥಿತಿಗತಿ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ 'ನಿರ್ಭಯಾ' ರೀತಿಯ ಲೈಂಗಿಕ ದೌರ್ಜನ್ಯ ಕೇಸ್‌: ಪರಾರಿಗೆ ಯತ್ನಿಸಿದ ಆರೋಪಿಗಳಿಗೆ ಗುಂಡು

Last Updated : May 28, 2021, 11:48 AM IST

ABOUT THE AUTHOR

...view details