ಕರ್ನಾಟಕ

karnataka

ETV Bharat / city

ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ - ಸೀಗೆಪಾಳ್ಯ

ನೆಲಮಂಗಲದ ಸೀಗೆಪಾಳ್ಯದಲ್ಲಿ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ.

ಜನರ ನಿದ್ದೆಗೆಡಿಸಿದ್ದ ಚೀತಾ ಕೊನೆಗೂ ಸೆರೆ
ಜನರ ನಿದ್ದೆಗೆಡಿಸಿದ್ದ ಚೀತಾ ಕೊನೆಗೂ ಸೆರೆ

By

Published : Jun 12, 2020, 11:04 AM IST

ನೆಲಮಂಗಲ: ಸಾಕಷ್ಟು ದಿನದಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ತಾಲೂಕಿನ ಸೀಗೆಪಾಳ್ಯದಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಇದಾಗಿದ್ದು, ಸುಮಾರು 8 ವರ್ಷದ ಗಂಡು ಚಿರತೆ ಎಂದು ಅಂದಾಜಿಸಲಾಗಿದೆ.

ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

ಇನ್ನು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಮುಗಿಬಿದ್ದಿದ್ದಾರೆ. ಚಿರತೆ ಸೆರೆಯಾದ ಸ್ಥಳಕ್ಕೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details