ಕರ್ನಾಟಕ

karnataka

ETV Bharat / city

ಸೈಟ್​ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ - Cheating to retired ACP in Bangalore news

ಜಿಗಣಿಯ ನವ್ಯ ಲೇಔಟ್​ನಲ್ಲಿ ₹90 ಲಕ್ಷ ಮೌಲ್ಯದ ಮೂರು ನಿವೇಶನ ಹೊಂದಿದ್ದ ಲವಕುಮಾರ್, ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಿರ್ಮಾಣ್ ಶೆಲ್ಟರ್ಸ್ ಕಂಪನಿ ಸಂಪರ್ಕಿಸಿ ತಮ್ಮ ಬಳಿಯ ನಿವೇಶನಗಳನ್ನು ಮಾರಾಟ ಮಾಡಿ ಕೊಡುವಂತೆ ಹೇಳಿದ್ದರು..

ಸೈಟ್​ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ
ಸೈಟ್​ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ವಂಚನೆ

By

Published : Sep 17, 2021, 10:39 PM IST

ಬೆಂಗಳೂರು :ಸೈಟ್​ ಮಾರಾಟ ಮಾಡಿ ಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಡಿ ನಿರ್ಮಾಣ್ ಶೆಲ್ಟರ್ಸ್ ಕಂಪನಿ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ನಿವೃತ್ತ ಎಸಿಪಿ ಲವಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ನಿರ್ಮಾಣ್ ಶೆಲ್ಟರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿನಾರಾಯಣ್, ಕಂಪನಿ‌ ಸಿಬ್ಬಂದಿ ಶಶಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಗಣಿಯ ನವ್ಯ ಲೇಔಟ್​ನಲ್ಲಿ ₹90 ಲಕ್ಷ ಮೌಲ್ಯದ ಮೂರು ನಿವೇಶನ ಹೊಂದಿದ್ದ ಲವಕುಮಾರ್, ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಿರ್ಮಾಣ್ ಶೆಲ್ಟರ್ಸ್ ಕಂಪನಿ ಸಂಪರ್ಕಿಸಿ ತಮ್ಮ ಬಳಿಯ ನಿವೇಶನಗಳನ್ನು ಮಾರಾಟ ಮಾಡಿ ಕೊಡುವಂತೆ ಹೇಳಿದ್ದರು.

ಇದರಂತೆ ಪವರ್ ಆಫ್ ಅಟಾರ್ನಿ ಮೂಲಕ ಮೂಲ ದಾಖಲಾತಿ ನೀಡಿದ್ದರು. ಕಂಪನಿಯೂ ಮೂರು ಸೈಟು ಮಾರಾಟ ಮಾಡಿ ಕೇವಲ ₹30 ಲಕ್ಷ ಹಣ ನೀಡಿ ಉಳಿದ ಹಣ ನೀಡದೆ ವಂಚಿಸಿದ್ದಾರೆ‌ ಎಂದು ದೂರಿನಲ್ಲಿ ನಿವೃತ್ತ ಎಸಿಪಿ ಉಲ್ಲೇಖಿಸಿದ್ದಾರೆ‌.

ABOUT THE AUTHOR

...view details