ಬೆಂಗಳೂರು :ರಾಜಧಾನಿಯ ರಸ್ತೆಗಳು ಮತ್ತು ಬಡಾವಣೆಗಳಿಗೆ ಇಟ್ಟಿರುವ ಬ್ರಿಟಿಷರ ಹಾಗೂ ಮುಸ್ಲಿಂರ ಹೆಸರುಗಳನ್ನು ಬದಲಾವಣೆ ಮಾಡಬೇಕು. ಗೌರಿಪಾಳ್ಯವನ್ನು ಗೋರಿಪಾಳ್ಯ ಎಂದು ಬದಲಾವಣೆ ಮಾಡಲಾಗಿದೆ. ಯೇಸು ನಗರ, ಇಸ್ಲಾಂ ನಗರ ಎಂದು ಹಲವು ಬಡಾವಣೆಗಳಿಗೆ ಹೆಸರಿಡಲಾಗಿದೆ. ನಮ್ಮ ದೇಶದ ಸನಾತನಧರ್ಮದ ಹೆಸರುಗಳನ್ನು ಇಡಬೇಕು ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮಂಗಳವಾರ ಋಷಿಕುಮಾರ ಸ್ವಾಮೀಜಿ ಈ ಕುರಿತು ವಿಡಿಯೋ ಬಿಡುಗಡೆ ಮಾಡಿ ಬ್ರಿಟಿಷರ ಮತ್ತು ಮುಸ್ಲಿಂ ಹೆಸರುಗಳನ್ನು ಬದಲಾಯಿಸಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ.