ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಕುರಿತು ಇಸ್ರೋ ವಿಜ್ಞಾನಿಗಳು ಮಹತ್ವದ ಸಂದೇಶವನ್ನು ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಜುಲೈ 22ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋದ ಚಂದ್ರಯಾನ- 2 ನೌಕೆಯು ಇನ್ನು ಎರಡೇ ದಿನಗಳಲ್ಲಿ ಚಂದ್ರನ ಕಡೆಗೆ ತನ್ನ ಪ್ರಯಾಣ ಆರಂಭಿಸಲಿದೆ. ಉಡ್ಡಯನದ ಬಳಿಕ 6 ಬಾರಿ ವಿವಿಧ ಕಕ್ಷೆಗಳಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ನೌಕೆ ಭೂ ಕಕ್ಷೆ ಮೀರಿ ಚಂದ್ರನ ಕಡೆಗೆ ಮುಖ ಮಾಡಿ ಇಂದು ನಸುಕಿನ 2.21ರ ಬಳಿಕ ಆರಂಭಿಸಿದೆ.