ಬೆಂಗಳೂರು:ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದದ ಕೇಂದ್ರವಾಗಿದೆ. ಈದ್ಗಾ ಮೈದಾನ, ಆಟದ ಮೈದಾನ ಎಂದು ಕರೆಯುವ ಮೈದಾನ ಬಿಬಿಎಂಪಿಯದ್ದೋ ವಕ್ಫ್ ಮಂಡಳಿಯದ್ದೋ ಎಂಬ ವಿವಾದ ಭುಗಿಲೆದ್ದಿದೆ. ಇದೀಗ ಈದ್ಗಾ ಮೈದಾನಕ್ಕೆ ಶಾಸಕ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೈದಾನದಲ್ಲಿ ಯೋಗ ದಿನಾಚರಣೆಗೆ ಹಿಂದೂ ಸಂಘಟನಗಳು ಮನವಿ ಮಾಡಿದ್ದವು. ಬಿಬಿಎಂಪಿ ಈ ಮನವಿ ತಿರಸ್ಕರಿಸಿತ್ತು. ವಕ್ಫ್ ಮಂಡಳಿ ಮೈದಾನ ತನಗೆ ಸೇರಿದ್ದು ಎಂದು ದಾಖಲೆಗಳನ್ನು ನೀಡಿದೆ. ದಾಖಲೆಯನ್ನು ಪರಿಶೀಲನೆ ನಡೆಸಲು ಕೆಲವು ದಿನ ಸಮಯಾವಕಾಶ ಬೇಕಿರುವುದರಿಂದ ಬಿಬಿಎಂಪಿ ಹಿಂದೂ ಸಂಘಟನೆಯ ಮನವಿ ತಿರಸ್ಕರಿಸಿತ್ತು.