ಕರ್ನಾಟಕ

karnataka

ETV Bharat / city

ಚಾಮರಾಜಪೇಟೆ ಬಂದ್: ಬಿಗಿ ಪೊಲೀಸ್ ಬಂದೋಬಸ್ತ್, ಖಾಸಗಿ ಶಾಲಾ-ಕಾಲೇಜಿಗೆ ರಜೆ - ಚಾಮರಾಜಪೇಟೆಯಲ್ಲಿ ಪೊಲೀಸ್​ ಬಿಗಿಬಂದೋಬಸ್ತ್​

ಇಲ್ಲಿನ ಈದ್ಗಾ ಮೈದಾನದ ಒಡೆತನದ ಬಗ್ಗೆ ವಿವಾದ ನಡೆಯುತ್ತಿದ್ದು, ಇಂದು ಹಿಂದೂಪರ ಸಂಘಟನೆಗಳು ಚಾಮರಾಜಪೇಟೆ ಬಂದ್​ಗೆ ಕರೆ ನೀಡಿವೆ.

chamarajpet-bandh-today-tight-police-security
ಇಂದು ಚಾಮರಾಜಪೇಟೆ ಬಂದ್ : ಬಿಗಿ ಪೊಲೀಸ್ ಬಂದೋಬಸ್ತ್

By

Published : Jul 12, 2022, 10:03 AM IST

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ವಿವಾದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಇಂದು ಚಾಮರಾಜಪೇಟೆ ಬಂದ್​ಗೆ ಕರೆ ನೀಡಿವೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಸಂಪೂರ್ಣ ಬಂದ್ ಇರಲಿದೆ. ಹಾಲು, ತರಕಾರಿ, ಮೆಡಿಕಲ್ ಬಿಟ್ಟು ಉಳಿದೆಲ್ಲ ಅಂಗಡಿಗಳು ಮುಚ್ಚಿರಲಿವೆ.

ಪೊಲೀಸ್ ಭದ್ರತೆ:ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲಿ 457 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉನ್ನತಾಧಿಕಾರಿಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ:ಚಾಮರಾಜಪೇಟೆ ಮತ್ತು ಸುತ್ತಮುತ್ತಲಿನ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಇನ್ನೂ ರಜೆ ಘೋಷಣೆ ಮಾಡಿಲ್ಲ. ಪರಿಸ್ಥಿತಿ ಅವಲೋಕಿಸಿಕೊಂಡು ನಿರ್ಧರಿಸುವ ಸಾಧ್ಯತೆಯಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಶಾಸಕರ ಕಚೇರಿ ತಲುಪಿದ ಕರಪತ್ರ:ಹಿಂದೂ ಸಂಘಟನೆಗಳ ಸದಸ್ಯರು ಈಗಾಗಲೇ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಕಚೇರಿಗೆ ತೆರಳಿ ಬಂದ್‌ಗೆ ಬೆಂಬಲ ಕೋರಿದ್ದಾರೆ. ಜಮೀರ್‌ ಮನೆಯಲ್ಲಿ ಇಲ್ಲದ ಕಾರಣ ಆಪ್ತ ಸಹಾಯಕರಿಗೆ ಕರಪತ್ರ ನೀಡಲಾಗಿದೆ ಎಂದು ಹಿಂದೂ ಸಂಘಟನೆಗಳ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ನಾಳೆ ಚಾಮರಾಜಪೇಟೆ ಬಂದ್, ಹೆಚ್ಚುವರಿ ಪೊಲೀಸರ ನಿಯೋಜನೆ: ಆರಗ ಜ್ಞಾನೇಂದ್ರ

ABOUT THE AUTHOR

...view details