ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಉಪಚುನಾವಣೆ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಬೇಟೆ ಆರಂಭಿಸಿದ್ದಾರೆ.
ಯಶವಂತಪುರದಲ್ಲಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಮತ ಬೇಟೆ ಮುನಿರತ್ನ ಜೊತೆ ತೆರೆದ ವಾಹನದಲ್ಲಿ ಜನರಿಗೆ ಕೈಮುಗಿದು ದಚ್ಚು ಮತಯಾಚಿಸಿದರು. ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆರಂಭಗೊಂಡ ರೋಡ್ ಶೋ, ವಾರ್ಡ್ ನಂ.17 ಜೆ.ಪಿ.ಪಾರ್ಕ್ ಚೌಡೇಶ್ವರಿ ಬಸ್ ನಿಲ್ದಾಣದಿಂದ ಮಾರ್ಗವಾಗಿ ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ಕೊನೆಗೊಂಡಿತು.
ಮಧ್ಯಾಹ್ನದ ನಂತರ ವಾರ್ಡ್ ನಂ.16 ಜಾಲಹಳ್ಳಿ ವಿಲೇಜ್ ಮೂಲಕ ಹೊರಟು ವಾರ್ಡ್ ನಂ.38 ಹೆಚ್.ಎಂ.ಟಿ ಪೀಣ್ಯ, ಗೊರಗುಂಟೆಪಾಳ್ಯ, ವಾರ್ಡ್ ನಂ.42 ಲಕ್ಷ್ಮಿದೇವಿನಗರದ ಕೂಲಿನಗರ, ವಾರ್ಡ್ ನಂ.69 ಲಗ್ಗೆರೆ ಆಲದಮರ ಸರ್ಕಲ್, ಕೊಟ್ಟಿಗೆಪಾಳ್ಯ ಪೈಪ್ ಲೈನ್ ಹಾಗೂ ಸುಂಕದ ಕಟ್ಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಸಂಜೆ ವಾರ್ಡ್ ನಂ.73 ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್, ರಾತ್ರಿ ವಾರ್ಡ್ ನಂ.129 ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿ, ವಾರ್ಡ್ ನಂ.160 ರಾಜರಾಜೇಶ್ವರಿನಗರದ ಪ್ರವೇಶದ್ವಾರದ ಮೂಲಕ ರಾಜರಾಜೇಶ್ವರಿ ನಗರದ ಪ್ರಮುಖ ರಸ್ತೆಗಳಲ್ಲಿ ದರ್ಶನ್ ಮತಯಾಚಿಸಲಿದ್ದಾರೆ.