ಬೆಂಗಳೂರು :ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿ ರಾಜಸ್ತಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಸಿ.ಕೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಉಮೇಶ್ ಖತಿಕ್ ಬಂಧಿತ ಆರೋಪಿ. ಹಲವು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕಿನಲ್ಲಿ ಸುತ್ತಾಡಿ ಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ. ಕಳ್ಳತನ ಬಳಿಕ ಊರಿಗೆ ರೈಲಿನಲ್ಲಿ ತೆರಳಿ ಹೆಂಡತಿಯನ್ನು ರಾಯಲ್ ಆಗಿ ನೋಡಿಕೊಳ್ಳುತ್ತಿದ್ದನಂತೆ.
ಸರಗಳ್ಳತನ ದೃಶ್ಯಸಿಸಿ ಟಿವಿಯಲ್ಲಿ ಸೆರೆಯಾಗಿರುವುದು.. ಇತ್ತೀಚೆಗೆ ಮಾರತಹಳ್ಳಿ, ಪುಟ್ಟೇನಹಳ್ಳಿ ಹಾಗೂ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಸರಗಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿ.ಕೆ.ಅಚ್ಚುಕಟ್ಟು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ನಗರದಲ್ಲಿ ಸರಗಳ್ಳತನ ಮಾಡಿದ್ದ ಆರೋಪಿ ಬಳಿಕ ಹೈದರಾಬಾದ್ಗೆ ಹೋಗಿ ಸರಗಳ್ಳತನ ಮಾಡುತ್ತಿದ್ದ. ಸದ್ಯ ಈತನ ಮೇಲೆ ರಾಜಸ್ತಾನದಲ್ಲಿ 18, ಹೈದರಾಬಾದ್ನಲ್ಲಿ 7 ಹಾಗೂ ಬೆಂಗಳೂರಿನಲ್ಲಿ 7 ಪ್ರಕರಣ ದಾಖಲಾಗಿವೆ.
ಪ್ರೀತಿಸಿದವಳಿಗಾಗಿ ಜೈಲು ಸೇರಿದ್ದ ಆರೋಪಿ :ಉಮೇಶ್ ಪ್ರೀತಿ ಮಾಡುವಾಗ ಆಕೆ ಅಪ್ರಾಪ್ತೆ. ಅಪ್ರಾಪ್ತೆಯನ್ನೇ ಮದುವೆಯಾಗಿ ಫೋಕ್ಸೋ ಕೇಸ್ ಅಡಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಮತ್ತೆ ಮದುವೆಯಾಗಿದ್ದ. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಭಯೋತ್ಪಾದಕರ ಅಡಗುತಾಣ ಭೇದಿಸಿದ ಭದ್ರತಾ ಪಡೆ: ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡು ವಶ