ದೊಡ್ಡಬಳ್ಳಾಪುರ : ಚಿನ್ನದ ಸರ ಪಾಲಿಶ್ ಮಾಡಿ ಕೊಡುವ ನೆಪದಲ್ಲಿ ಗ್ರಾಮಕ್ಕೆ ಬಂದ ಸರಗಳ್ಳರು ಮಹಿಳೆಯಿಂದ ಮಾಂಗಲ್ಯ ಸರ ಕಿತ್ಕೊಂಡು ಪರಾರಿಯಾಗುತ್ತಿದ್ದರು. ಈ ವೇಳೆ, ಕಳ್ಳನೊಬ್ಬನನ್ನು ಜನರೇ ಹಿಡಿದು ಗೂಸಾ ಕೊಟ್ಟರೇ, ಮತ್ತೊಬ್ಬ ಕಳ್ಳ ಬೈಕ್ನಲ್ಲಿ ಪರಾರಿಯಾಗುವ ಭರದಲ್ಲಿ ಗ್ರಾಮದ ಬೋರ್ಡ್ಗೆ ಡಿಕ್ಕಿ ಹೊಡೆದು ತಾನಾಗೇ ಸಿಕ್ಕಿಬಿದ್ದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಇದೇ ಸಮಯದಲ್ಲಿ ಭಾಗ್ಯಶ್ರೀ ಎಂಬ ಮಹಿಳೆ ಮನೆ ಮುಂದೆ ನಿಂತಿದ್ದಾಗ ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯನ್ನ ಮಾತನಾಡಿಸಿದ್ದಾರೆ. ಸರಗಳ್ಳರ ಮಾತಿಗೆ ಮರುಳಾದ ಆಕೆ ಪಾಲಿಶ್ಗಾಗಿ ತನ್ನ ಮಾಂಗಲ್ಯ ಸರವನ್ನ ಕೊಟ್ಟಿದ್ದಾಳೆ. ತಕ್ಷಣವೇ ಅವರು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಓರ್ವನನ್ನು ಹಿಡಿದ ಗ್ರಾಮಸ್ಥರು ಸಖತ್ತಾಗಿ ಗೂಸಾ ನೀಡಿದ್ದಾರೆ.