ದೊಡ್ಡಬಳ್ಳಾಪುರ: ನಗರದಲ್ಲಿ ನಾಲ್ವರು ಸರಗಳ್ಳರು ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಆತನಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುವ ಯತ್ನದಲ್ಲಿ ಓರ್ವ ಕಳ್ಳನನ್ನು ಸೆರೆಹಿಡಿದ ಸಾರ್ವಜನಿಕರು ಪೊಲೀಸರ ವಶಕ್ಕೆ ನೀಡಿದ್ದಾರೆ.
ಚಾಕು ತೋರಿಸಿ ಚಿನ್ನದ ಸರ ಕಳವು: ಸರಗಳ್ಳನ ಹಿಡಿದು ಪೊಲೀಸ್ ವಶಕ್ಕೆ ನೀಡಿದ ಜನ - ದೊಡ್ಡಬಳ್ಳಾಪುರ ಸರಗಳ್ಳನನ್ನ ಹಿಡಿದು ಪೊಲೀಸ್ ವಶಕ್ಕೆ ನೀಡಿದ ಸಾರ್ವಜನಿಕರು
ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ನಾಲ್ವರು ಕಳ್ಳರ ಪೈಕಿ ಓರ್ವ ಸರಗಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸರಗಳ್ಳ
ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿ ಇಂದು ಮಧ್ಯಾಹ್ನ ನಾಲ್ವರು ಸರಗಳ್ಳರ ತಂಡ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಹೆದರಿಸಿ ಚಿನ್ನದ ಸರ ಕಿತ್ಕೊಂಡು ಓಡಿ ಹೋಗುತ್ತಿದ್ದರು. ಅವರ ಹಿಂದೆ ಚೈನ್ ಕಳೆದುಕೊಂಡ ವ್ಯಕ್ತಿಯೂ ಸಹ ಓಡಿದ್ದಾನೆ.
ರಂಗಪ್ಪ ಸರ್ಕಲ್ ಬಳಿಯ ಶೆಡ್ನಲ್ಲಿ ಕಳ್ಳರು ಅವಿತು ಕುಳಿತಿರುವ ಮಾಹಿತಿ ತಿಳಿದ ಸ್ಥಳೀಯ ನಿವಾಸಿಗಳು ಸರಗಳ್ಳರನ್ನು ಹಿಡಿಯುವ ಯತ್ನ ನಡೆಸಿದ್ದಾರೆ. ಈ ವೇಳೆ, ಮೂವರು ಕಳ್ಳರು ಪರಾರಿಯಾಗಿದ್ದು, ಓರ್ವ ಕಳ್ಳನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.