ಚಿಕ್ಕಮಗಳೂರು:ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರು ಬುದ್ಧಿವಂತರಾಗಿದ್ದಾರೆ. ನಮ್ಮ ಮಾತು- ನಡೆಯನ್ನು ಅಳತೆ ಮಾಡುತ್ತಾರೆ. ಜೆಡಿಎಸ್ ಇನ್ನಾದರೂ ಜವಾಬ್ದಾರಿಯುತ ಪಕ್ಷವಾಗಿ ನಡೆದುಕೊಳ್ಳಲಿ. ಮತದಾರರ ಬಗ್ಗೆ ಟೇಕನ್ ಫಾರ್ ಗ್ರಾಂಟೆಡ್ ಮನಸ್ಥಿತಿ ಇರಬಾರದು. ಯಾರನ್ನಾದರೂ ಟೀಕೆ ಮಾಡುವಾಗ ಹಿನ್ನೆಲೆ-ಮುನ್ನೆಲೆ ತಿಳಿದಿರಬೇಕು ಎಂದರು.