ಕರ್ನಾಟಕ

karnataka

ETV Bharat / city

ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯಕ್ಕೆ ಆಗಮಿಸಲಿದ್ದಾರೆ ಅಮಿತ್ ಶಾ! - ಎರಡು ದಿನಗಳ ಕಾಲ ಅಮಿತ್​ ಶಾ ಕರ್ನಾಟಕ ಪ್ರವಾಸ

ಜನವರಿ 16 ಮತ್ತು 17 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಪೂರ್ವ ನಿಗದಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಯಲ್ಲಿ ಸಚಿವ ಸಂಪುಟ ವಿಸ್ತರಣೆ ನಂತರದ ಬೆಳವಣಿಗೆ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಿದ್ದಾರೆ..

central home minister amit shah visits karnataka
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ

By

Published : Jan 13, 2021, 3:46 PM IST

ಬೆಂಗಳೂರು :ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ (ಜನವರಿ 16 ಮತ್ತು 17ರಂದು) ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸರ್ಕಾರಿ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಸಂಪುಟ ವಿಸ್ತರಣೆ ನಂತರ ಉದ್ಭವಿಸಲಿರುವ ಅಸಮಾಧಾನದಂತಹ‌ ಚಟುವಟಿಕೆಗೂ ಬ್ರೇಕ್ ಹಾಕಲು ಮುಖ್ಯಮಂತ್ರಿ ಬಿ ಎಸ್​ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ರಾಜ್ಯ ಪ್ರವಾಸ ವಿವರ :ಜ.16ರ ಶನಿವಾರ ಬೆಳಗ್ಗೆ 9 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಡಲಿರುವ ಅಮಿತ್ ಶಾ 11.30ಕ್ಕೆ ಹೆಚ್ಎಎಲ್​ಗೆ ಆಗಮಿಸಲಿದ್ದಾರೆ. 11:45ಕ್ಕೆ ವಿಶೇಷ ವಿಮಾನದ ಮೂಲಕ ಭದ್ರಾವತಿಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 12.45ಕ್ಕೆ ಅಲ್ಲಿಗೆ ತಲುಪಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಭದ್ರಾವತಿ ರ್ಯಾಪಿಡ್ ಆ್ಯಕ್ಷನ್ ಪೋರ್ಸ್‌​ನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಭದ್ರಾವತಿಯಿಂದ ಹೊರಟು ಸಂಜೆ 4ಕ್ಕೆ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಮರಳಲಿದ್ದಾರೆ.

ಪೊಲೀಸ್​ ವಸತಿ ಗೃಹ ಉದ್ಘಾಟನೆ:ಶನಿವಾರ ಸಂಜೆ 4.40ಕ್ಕೆ ವಿಧಾನಸೌಧ ಮುಂಭಾಗ ಇಆರ್​​ಎಸ್​ಎಸ್ ವಾಹನಗಳಿಗೆ ಹಸಿರು ನಿಶಾನೆ ತೋರಲಿರುವ ಅಮಿತ್ ಶಾ, ಸಂಜೆ 5ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ವರ್ಚುವಲ್ ಮೂಲಕ ಪೊಲೀಸ್ ವಸತಿಗೃಹ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ...ಸಂಪುಟದಲ್ಲಿ ಸಿ.ಪಿ. ಯೋಗೀಶ್ವರ್​ಗೆ ಅವಕಾಶ.. ಇಂದು ರಾತ್ರಿ ಅತೃಪ್ತರ ಸಭೆ?

ನಂತರ ವಿಜಯಪುರ ಐಆರ್​​ಬಿ ಸೆಂಟರ್ ಕಾರ್ಯಕ್ರಮ ಉದ್ಘಾಟನೆ ನಡೆಸಲಿದ್ದು, ಸಂಜೆ 6.15ರಿಂದ 6.30ರವರೆಗೆ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಉಪಸ್ಥಿತರಿರಲಿದ್ದಾರೆ. ಸಂಜೆ-6.30ಕ್ಕೆ ಸಮಿತಿ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ (ಎಡಿಜಿಪಿ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗಳು) ನಡೆಸಿ ನಂತರ 7.30ಕ್ಕೆ ವಿಧಾನಸೌಧದಿಂದ ನಿರ್ಗಮಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್​ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಜ.17ರ ಭಾನುವಾರ ಬೆಳಗ್ಗೆ 9 ಗಂಟೆಗೆ ವಿಂಡ್ಸರ್ ಮ್ಯಾನರ್​​ನಿಂದ ಹೆಚ್​ಎಎಲ್‌ಗೆ ತೆರಳಿ 9.30ಕ್ಕೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಲಿದ್ದಾರೆ. ಬೆಳಗ್ಗೆ 10.30ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಅಲ್ಲಿಂದ ಬಾಗಲಕೋಟೆ ಹೆಲಿಪ್ಯಾಡ್​ಗೆ 11.20ಕ್ಕೆ ತಲುಪಲಿದ್ದಾರೆ. ಬೆಳಗ್ಗೆ 11.30ಕ್ಕೆ ಮುರುಗೇಶ್ ನಿರಾಣಿ ಸಂಸ್ಥೆಯ ಎಥನಾಲ್ ಯೋಜನೆಗೆ ಚಾಲನೆ ನೀಡಲಿರುವ ಅಮಿತ್ ಶಾ ನಂತರ ಮಧ್ಯಾಹ್ನ 12.30ಕ್ಕೆ ಚಾಪರ್ ಮೂಲಕ ಬೆಳಗಾವಿಗೆ ಪ್ರಯಾಣಿಸಲಿದ್ದಾರೆ.

ಮಧ್ಯಾಹ್ನ 1.05ಕ್ಕೆ ಸರ್ಕ್ಯೂಟ್ ಹೌಸ್ ತಲುಪಿ ವಿಶ್ರಾಂತಿ ಪಡೆಯಲಿದ್ದು, ಮಧ್ಯಾಹ್ನ 3ಗಂಟೆಗೆ ಕೆಎಲ್ಇ ಆಸ್ಪತ್ರೆ ಭೇಟಿ ನೀಡಲಿದ್ದಾರೆ. ಸಂಜೆ 4.10ಕ್ಕೆ ಜೆಎನ್ಎಂಸಿ ಮೈದಾನದಲ್ಲಿ ಪಕ್ಷದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 5.40ಕ್ಕೆ ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲಿದ್ದಾರೆ. ಸಂಜೆ 6.10ಕ್ಕೆ ಸಂಕಮ್ ಹೋಟೆಲ್​​ನಲ್ಲಿ ಪಕ್ಷದ ಪ್ರಮುಖ ನಾಯಕರು ಹಾಗೂ ಬೆಳಗಾವಿ ಜಿಲ್ಲಾ ನಾಯಕರ ಸಭೆ ನಡೆಸಲಿದ್ದಾರೆ. ಅದಾದ ನಂತರ ಸಂಜೆ 7.40ಕ್ಕೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ABOUT THE AUTHOR

...view details