ಕರ್ನಾಟಕ

karnataka

ETV Bharat / city

ಕೇಂದ್ರ ಸರಕಾರದ ಜನ ಸಂವಾದ ರ್ಯಾಲಿ ಜನರನ್ನು ಮರುಳು ಮಾಡುವ ತಂತ್ರ: ಕಾಂಗ್ರೆಸ್ ಆರೋಪ

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾರತದಲ್ಲಿ ಕೋವಿಡ್ ಮಹಾಮಾರಿಯನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಭಾರತದಲ್ಲಿ ಗಗನಕ್ಕೇರುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ವೈರಸ್ ಕೈಗೆಟಕದ ಮಟ್ಟಕ್ಕೆ ಬೆಳೆದಿದೆ ಎನ್ನುವುದು ತಿಳಿದಿಲ್ಲವೇ. ಇದೊಂದು ಅತ್ಯಂತ ಕೆಟ್ಟ ಹಾಗೂ ಸುಳ್ಳಿನ ಸುದ್ದಿ ಬಿತ್ತುವ ಗುಂಪಾಗಿದೆ ಎಂದು ಆರೋಪಿಸಿದೆ.

Central government strategy to fool people Congress alleges
ಕೇಂದ್ರ ಸರಕಾರದ ಜನ ಸಂವಾದ ರ್ಯಾಲಿ ಜನರನ್ನು ಮರುಳು ಮಾಡುವ ತಂತ್ರ: ಕಾಂಗ್ರೆಸ್ ಆರೋಪ

By

Published : Jun 14, 2020, 11:46 PM IST

ಬೆಂಗಳೂರು: ಜನ ಸಂವಾದ ರ್ಯಾಲಿ ಹೆಸರಿನಲ್ಲಿ ರಾಷ್ಟ್ರೀಯ ಬಿಜೆಪಿ ಜನರಲ್ಲಿ ಇನ್ನೊಮ್ಮೆ ಮರುಳು ಮಾಡುವ ಕಾರ್ಯ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಕೇಂದ್ರ ಸರಕಾರದ ಜನ ಸಂವಾದ ರ್ಯಾಲಿ ಜನರನ್ನು ಮರುಳು ಮಾಡುವ ತಂತ್ರ: ಕಾಂಗ್ರೆಸ್ ಆರೋಪ

ಕೇಂದ್ರ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ಜನ ಸಂವಾದ ರ್ಯಾಲಿಯಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾರತದಲ್ಲಿ ಕೋವಿಡ್ ಮಹಾಮಾರಿಯನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಭಾರತದಲ್ಲಿ ಗಗನಕ್ಕೇರುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ವೈರಸ್ ಕೈಗೆಟಕದ ಮಟ್ಟಕ್ಕೆ ಬೆಳೆದಿದೆ ಎನ್ನುವುದು ತಿಳಿದಿಲ್ಲವೇ. ಇದೊಂದು ಅತ್ಯಂತ ಕೆಟ್ಟ ಹಾಗೂ ಸುಳ್ಳಿನ ಸುದ್ದಿ ಬಿತ್ತುವ ಗುಂಪಾಗಿದೆ ಎಂದು ಆರೋಪಿಸಿದೆ.

ರಾಜ್ಯ ಬಿಜೆಪಿ ನಾಯಕರು ಈ ರ್ಯಾಲಿಯಲ್ಲಿ ತಮ್ಮನ್ನ ತಾವು ವೈಭವೀಕರಿಸಿ ಕೊಳ್ಳುವ ಕೆಲಸ ಮಾಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಮಾತಿನಲ್ಲಿ ಇದು ಆಚರಣೆಯ ಸಮಯ ಎಂದಿದ್ದಾರೆ. ಅವರು ನಿಜವಾಗಿಯೂ ಏನನ್ನು ಉಲ್ಲೇಖಿಸುತ್ತಿದ್ದಾರೆ ಎನ್ನುವುದಕ್ಕೆ ಆಶ್ಚರ್ಯ ಉಂಟಾಗುತ್ತಿದೆ. ನಾವು ಇಂತಹ ಸಮಯವನ್ನು ಆಚರಿಸಬೇಕೆ? ಕಾರ್ಮಿಕರಿಗೆ ಎದುರಾಗಿರುವ ಬಿಕ್ಕಟ್ಟು, ಉದ್ಯೋಗ ನಷ್ಟ, ವಲಸೆ ಕಾರ್ಮಿಕರ ಸಂಕಷ್ಟ, ಕೋವಿಡ್ ಹೆಸರಿನಲ್ಲಿ ನಡೆದ ಹಗರಣಗಳು ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಮಾಡಿಕೊಂಡ ವೈಫಲ್ಯ ಇಂತಹ ಪರಿಸ್ಥಿತಿ ಎದುರಾಗುವಂತೆ ಮಾಡಿದೆ. ಇಂತಹ ಸಂದರ್ಭವನ್ನು ಆಚರಿಸಿ ಎಂದು ಬಿಜೆಪಿ ಹೇಳುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಪಕ್ಷ ಹೇಳಿದೆ.

ಆಹಾರ ನೀಡಲಾಗಿದೆಯೇ?:

ಕೇಂದ್ರ ಬಿಜೆಪಿ ನಾಯಕರು ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 9 ಕೋಟಿ ಜನರಿಗೆ ಆಹಾರವನ್ನು ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ವಲಸಿಗರು ಮತ್ತು ಕಾರ್ಮಿಕರು ಇದರ ಒಂದು ಭಾಗವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ನಮಗೆ ತಿಳಿದಿರುವಂತೆ ಕಾರ್ಮಿಕರು ಮತ್ತು ವಲಸಿಗರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತಮ್ಮನ್ನು ತಾವು ಈ ಕೋವಿಡ್ ಆತಂಕದ ಸಂದರ್ಭದಲ್ಲಿ ರಕ್ಷಿಸಿ ಕೊಳ್ಳುತ್ತಿದ್ದರು. ಆಹಾರ ಮತ್ತು ನೀರು ಸಹ ಅವರಿಗೆ ಲಭ್ಯವಾಗಿಲ್ಲ ಎನ್ನುವುದನ್ನು ಅವರು ನೆನಪಿಸಿಕೊಳ್ಳಲಿ ಎಂದಿದೆ.

ಅಭಿವೃದ್ಧಿ ಆಗಿಲ್ಲ:

ಇಂದಿನ ರ್ಯಾಲಿಯಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಕಳೆದ ಆರು ವರ್ಷಗಳಲ್ಲಿ 60 ವರ್ಷಗಳ ನಿಯಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ನಾವು ನೋಡಿದ 60ವರ್ಷಗಳ ಆಡಳಿತಕ್ಕೆ ನೀವು ಹೊಂದಿಕೆಯಾಗುವುದಿಲ್ಲವಾದ್ದರಿಂದ ನಾವು ನೋಡಿದ ಕೊನೆಯ ಆರು ವರ್ಷಗಳು ರಾಷ್ಟ್ರದಲ್ಲಿ ಯಾವ ರೀತಿ ಆರ್ಥಿಕತೆ ಕುಸಿಯುತ್ತಿದೆ, ಜಿಡಿಪಿ ಎಷ್ಟು ಕೆಟ್ಟ ಮಟ್ಟಕ್ಕೆ ತಲುಪಿದೆ, ಉದ್ಯೋಗ ನಷ್ಟ ಕಳೆದ 40 ವರ್ಷಗಳಲ್ಲಿ ಆಗದಷ್ಟು ಆಗಿದೆ. ನೆರೆಯ ನೇಪಾಳ ರಾಷ್ಟ್ರ ಕೂಡ ನಮ್ಮನ್ನ ಬೆದರಿಸುತ್ತಿದೆ. ಇದೆಲ್ಲ ಬೆಳವಣಿಗೆಗಳು ರಾಷ್ಟ್ರದ ಪ್ರಗತಿಯನ್ನು ಯಾವ ನಿಟ್ಟಿನಲ್ಲಿ ಕೆಡುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ನಡ್ಡಾ ಉತ್ತರಿಸಲಿ:

ಪ್ರಧಾನಿ ನರೇಂದ್ರ ಮೋದಿ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ಜೊತೆಯಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಜೆ ಪಿ ನಡ್ಡಾ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಅವರು ನಮ್ಮ ಪ್ರಶ್ನೆಗೆ ಉತ್ತರಿಸಬೇಕು ಲಾಕ್ಡೌನ್ ಘೋಷಣೆ ಮಾಡಿದ ಸಂದರ್ಭ ಪ್ರಧಾನಿ ನಮ್ಮನ್ನು ವಿಶ್ವಾಸಕ್ಕೆ ಪಡೆಯದಿರುವುದು ಏಕೆ? ನಿಯಮಾವಳಿಗಳನ್ನು ಸಡಿಲಿಸುವ ಆಗಲು ನಮ್ಮನ್ನ ವಿಶ್ವಾಸಕ್ಕೆ ಪಡೆಯದಿರುವುದು ಸರಿಯೇ? ಯಾವುದೇ ಯೋಚನೆ ಇಲ್ಲದೆ ಅತ್ಯಂತ ಯೋಜಿತವಲ್ಲದ ಮತ್ತು ಹಾನಿಕಾರಕ ರೀತಿಯ ನಿರ್ಧಾರವಾಗಿ ಪರಿಣಮಿಸಿದೆ ಎಂದು ಬಳಲುತ್ತಿರುವ ಜನರ ಮೂಲಕ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದೇ ರ್ಯಾಲಿಯಲ್ಲಿ ಭಾಷಣ ಮುಂದುವರಿಸಿದ ಜೆ ಪಿ ನಡ್ಡಾ ಭ್ರಷ್ಟಜನರು ಜೈಲಿಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ನೀರು ಸರಬರಾಜು ಹಗರಣದಲ್ಲಿ ಬಿಜೆಪಿಯ ಎಚ್ ಬಿ ಶರ್ಮ, ನಾರದ ಹಗರಣದಲ್ಲಿ ಭಾಗಿಯಾದ ಮುಕುಲ್ ರಾಯ್, ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವ ಸಿಂಗ್ ಚೌಹಾಣ್, ಭೂಮಿ ಮತ್ತು ಜಲವಿದ್ಯುತ್ ಯೋಜನೆ ಹಗರಣದಲ್ಲಿ ಭಾಗಿಯಾದ ಆರ್. ಫೋಖ್ರಿಯಲ್, ಹಾಗೂ ಬಿಜೆಪಿ ನಾಯಕ ಎಂ ರೇನ್ ನಡೆಸಿರುವ ಭ್ರಷ್ಟಾಚಾರ ಆರೋಪಗಳಿಗೆ ಉತ್ತರ ನೀಡುತ್ತೀರಿ ಎಂದು ಕೇಳಿದೆ.

ಉತ್ತಮ ಬಾಂಧವ್ಯ ಇಲ್ಲ:

ಅಕ್ಕಪಕ್ಕದ ರಾಷ್ಟ್ರಗಳ ಜೊತೆ ನರೇಂದ್ರ ಮೋದಿ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಮತ್ತು ಭಾರತದ ಬಲವಾಗಿದೆ ಎಂದು ನಡ್ಡಾ ಹೇಳುತ್ತಿದ್ದಾರೆ. 2019 ರ ಅಕ್ಟೋಬರ್ ನಲ್ಲಿ ಬಾಂಗ್ಲಾದೇಶ ಪಡೆಗಳು ಭಾರತೀಯ ಕಾವಲುಗಾರರನ್ನು ಸಾಯಿಸಿದೆ. 2020ರ ಜೂನ್ ನಲ್ಲಿ ನೇಪಾಳ ಭಾರತೀಯ ರೈತರನ್ನು ಹೊಂದಿದೆ. ಶ್ರೀಲಂಕಾ ಪಾಕಿಸ್ತಾನ ಮತ್ತು ಅಕ್ಕಪಕ್ಕದ ಇತರೆ ರಾಷ್ಟ್ರಗಳು ಭಾರತದ ವಿರುದ್ಧ ಹೋರಾಟ ನಡೆಸಿದ್ದು ನೀವು ಯಾವ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ABOUT THE AUTHOR

...view details