ಬೆಂಗಳೂರು:ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ 2022-23 ನೇ ಸಾಲಿನ ಆರಂಭದಲ್ಲಿಯೇ ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ರಿಯಾಯಿತಿ ದರ ಹೆಚ್ಚಿಸಿದೆ. ಪ್ರತಿ 50 ಕೆ.ಜಿ ಚೀಲದ ಡಿಎಪಿ ಗೊಬ್ಬರದ ಬೆಲೆ 3,850.65 ರೂ. ಇದ್ದು, ರೈತರು ಈ ಗೊಬ್ಬರವನ್ನು 1,350 ರೂ.ಗೆ ಖರೀದಿ ಮಾಡುತ್ತಿದ್ದಾರೆ. ಉಳಿದ 2500.65 ರೂ. (ಶೇ.64.94) ರಷ್ಟು ರಿಯಾಯಿತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.
ಪ್ರತಿ 50 ಕೆ.ಜಿ ಚೀಲದ ಎಂಒಪಿ ಗೊಬ್ಬರದ ಬೆಲೆ 2,459 ರೂ. ಇದ್ದು, ರೈತರು 1700 ರೂ.ಗೆ ಖರೀದಿ ಮಾಡುತ್ತಿದ್ದಾರೆ. ಉಳಿದ 759.3 ರೂ. (ಶೇ.30.87) ರಷ್ಟು ರಿಯಾಯಿತಿ ದರವನ್ನು ಕೇಂದ್ರ ಸರ್ಕಾರ ತುಂಬುತ್ತಿದೆ.