ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಬ್ಲ್ಯಾಕ್ ಫಂಗಸ್ ಆರ್ಭಟ ಮುಂದುವರೆದಿದೆ. ಈವರೆಗೆ 3079 ಜನರಲ್ಲಿ ಮ್ಯುಕೋರ್ಮೈಕೋಸಿಸ್ ಫಂಗಸ್ ಪತ್ತೆಯಾಗಿದ್ದು, 244 ಜನರು ಇದರಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಸಾವಿರ ಗಡಿ ದಾಟಿದ್ದು 1004 ಜನರಲ್ಲಿ ಪತ್ತೆಯಾಗಿದೆ. 74 ಜನರು ಮೃತರಾಗಿದ್ದಾರೆ. ನಗರದ ವಿಕ್ಟೋರಿಯಾದಲ್ಲಿ 198, ಬೌರಿಂಗ್ 253 ಒಟ್ಟು 451 ಜನರಿಗೆ ಚಿಕಿತ್ಸೆ ಮುಂದುವರೆದಿದೆ.
ರಾಜ್ಯಕ್ಕೆ ಬಂತು ಲಿಪೊಸೊಮಾಲ್ ಎಂಫೋಟೆರಿಸಿನ್- ಬಿ ವಯಲ್ಸ್
ಮ್ಯುಕೋರ್ಮೈಕೋಸಿಸ್ ಫಂಗಸ್ಗೆ ನೀಡುವ ಔಷಧ ಲಿಪೊಸೊಮಾಲ್ ಎಂಫೋಟೆರಿಸಿನ್- ಬಿ 5,240 ವಯಲ್ಸ್ಅನ್ನು ಕರ್ನಾಟಕಕ್ಕೆ ಒದಗಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೆಚ್ಚುವರಿಯಾಗಿ 61,120 ವಯಲ್ಸ್ ಹಂಚಿಕೆ ಮಾಡಲಾಗಿದ್ದು, ದೇಶಾದ್ಯಂತ ಇದುವರೆಗೂ 7.9ಲಕ್ಷ ವಯಲ್ಸ್ ಪೂರೈಸಲಾಗಿದೆ. ಇದರಲ್ಲಿ ರಾಜ್ಯಕ್ಕೆ 61,120 ವಯಲ್ಸ್ ದೊರೆತಿದೆ ಎಂದು ಕೇಂದ್ರ ರಾಸಾನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.