ಕರ್ನಾಟಕ

karnataka

By

Published : Apr 4, 2021, 7:49 PM IST

ETV Bharat / city

ರಾಜ್ಯಕ್ಕೆ ಪ್ರತ್ಯೇಕ ಕಂತಿನಲ್ಲಿ ನಾಳೆ ಕೇಂದ್ರದಿಂದ ಕೊರೊನಾ ಲಸಿಕೆ ರವಾನೆ : ಸಚಿವ ಡಾ. ಸುಧಾಕರ್

ಸದ್ಯ ರಾಜ್ಯ ಸರ್ಕಾರದ ಬಳಿ 7 ಲಕ್ಷ ಲಸಿಕೆಗಳಷ್ಟು ದಾಸ್ತಾನಿದೆ. ನಿನ್ನೆ 2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ, ಆದರೂ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರವು ಲಸಿಕೆಗಳನ್ನು ತುರ್ತಾಗಿ ಪೂರೈಕೆ ಮಾಡ್ತಿದೆ..

central-government-giving-1525-500-dose-corona-vaccine-for-karnataka
ಸಚಿವ ಸುಧಾಕರ್

ಬೆಂಗಳೂರು :ಕರ್ನಾಟಕಕ್ಕೆ ನಾಳೆ ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ರವಾನೆಯಾಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟೀಟ್ವ್ ಮೂಲಕ ತಿಳಿಸಿದ್ದಾರೆ.

ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದೆ. ಮತ್ತೊಂದು ಕಂತಿನಲ್ಲಿ 10,00,000 ಡೋಸ್ ಲಸಿಕೆ ವಿಮಾನದ ಮೂಲಕ ನಾಳೆ ಸಂಜೆ ಬೆಂಗಳೂರು ತಲುಪಲಿದೆ.

ಸದ್ಯ ರಾಜ್ಯ ಸರ್ಕಾರದ ಬಳಿ 7 ಲಕ್ಷ ಲಸಿಕೆಗಳಷ್ಟು ದಾಸ್ತಾನಿದೆ. ನಿನ್ನೆ 2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ, ಆದರೂ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರವು ಲಸಿಕೆಗಳನ್ನು ತುರ್ತಾಗಿ ಪೂರೈಕೆ ಮಾಡ್ತಿದೆ.

ABOUT THE AUTHOR

...view details