ಬೆಂಗಳೂರು: ರಾಜ್ಯದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಬೇರೆ ರಾಜ್ಯಗಳಲ್ಲೂ ಅಳವಡಿಕೆ ಮಾಡಬೇಕೆಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮನವಿ ಮಾಡಿದರು. ಗುರುವಾರದಂದು ವಿಧಾನಸೌಧದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕೊರೊನಾ ನಂತರ ಕಲಿಕೆಗೆ ಉತ್ತಮ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಮಾಡಿದೆ. ಕರ್ನಾಟಕದ ಮಾದರಿಯನ್ನು ಬೇರೆ ರಾಜ್ಯಗಳಲ್ಲೂ ಅಳವಡಿಕೆ ಮಾಡಲು ನಾನು ಮನವಿ ಮಾಡುತ್ತೇನೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
NEP ಕರ್ನಾಟಕದಲ್ಲಿ ಹೇಗೆ ನಡೆಯುತ್ತಿದೆ ಅಂತ ತಿಳಿಯಲು ಪರಿಶೀಲನಾ ಸಭೆ ನಡೆಸಲಾಯಿತು. ಕಸ್ತೂರಿ ರಂಗನ್ ಅವರನ್ನು ಭೇಟಿ ಮಾಡಿದೆ. ಹೊಸ ಸಿಲೆಬಸ್ ಮತ್ತು ಪಠ್ಯ ಬರುತ್ತಿದೆ. ಇದು ಹೊಸ ರೀತಿಯ ಶಿಕ್ಷಣ ನೀಡಲಿದೆ. ಪ್ರಥಮ ಹಂತದ ಕಲಿಕೆಯ ವ್ಯವಸ್ಥೆ ಆಗಿದೆ. ಕರ್ನಾಟಕ NEP ಜಾರಿ ತಂದಿರುವ ಹಾಗೂ ಪ್ರಗತಿಯಲ್ಲಿರುವ ರಾಜ್ಯ. ಸದ್ಯ 1.2ಕೋಟಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ಕೊರೊನಾ ಸಂದರ್ಭದಲ್ಲಿ ಕಲಿಕಾ ಚೇತರಿಕೆ ಹೆಸರಲ್ಲಿ ಶಿಕ್ಷಣ ನೀಡಿತು. ಕರ್ನಾಟಕದಲ್ಲಿ ಇರುವ NEP ಮಾಡಲ್ ಎಲ್ಲೆಡೆ ಮಾದರಿಯಾಗಲಿದೆ ಎಂದರು.