ಕರ್ನಾಟಕ

karnataka

ETV Bharat / city

CD Case: ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ.. ಆಮೆ ವೇಗದಲ್ಲಿ ತನಿಖೆ - ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ

ಇತ್ತೀಚೆಗೆ ಕೋಟ್೯ ನಲ್ಲಿ ಸಿಡಿ ಪ್ರಕರಣ ವಿಚಾರಣೆ ನಡೆದಿದ್ದು, ತನಿಖಾ ವರದಿಗೆ ಎಸ್ಐಟಿ ಮುಖ್ಯಸ್ಥರ ಸಹಿ ಇಲ್ಲದೇ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು.

cd-case-sit-chief-sowmendu-mukarjee-holiday-extended
ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ ವಿಸ್ತರಣೆ: ಆಮೆ ವೇಗದಲ್ಲಿ ಸಿಡಿ ಪ್ರಕರಣದ ತನಿಖೆ

By

Published : Jun 30, 2021, 2:33 AM IST

Updated : Jun 30, 2021, 5:04 AM IST

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿಯೇ ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುವ ಸಾಧ್ಯತೆ ಹೆಚ್ಚಿದೆ. ವಿಶೇಷ ತನಿಖಾ ತಂಡ (ಎಸ್ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಮತ್ತೆ ಒಂದು ತಿಂಗಳು ರಜೆ ಪಡೆದಿದ್ದು, ವಿಚಾರಣೆ ನಡೆಸುವುದು ಅವರ ಅಧೀನ ಅಧಿಕಾರಿಗಳ ಹೆಗಲ ಮೇಲಿದೆ.

ಈಗಾಗಲೇ ಎರಡು ತಿಂಗಳು ರಜೆ ಪಡೆದಿದ್ದ ಸೌಮೇಂದು ಮುಖರ್ಜಿ ಮತ್ತೆ ಒಂದು ತಿಂಗಳು ರಜೆ ಪಡೆಯುವ ಮೂಲಕ ತನಿಖೆ ವೇಗ ಆಮೆಗತಿಯಲ್ಲಿ ಸಾಗಲಿದೆ. ಪ್ರಕರಣದ ಮುಖ್ಯ ಆರೋಪಿಗಳು ಎನ್ನಲಾದ ನರೇಶ್ ಗೌಡ ಹಾಗೂ ಶ್ರವಣ್​​ನನ್ನು ಎಸ್ಐಟಿ ಮೂರು ಬಾರಿ ವಿಚಾರಣೆ ನಡೆಸಿದ್ದು, ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಆರೋಪಿಗಳ ವಿಚಾರಣೆ ಇನ್ನೂ ನಡೆಯಲಿದ್ದು, ಇಂಥಹ ವೇಳೆಯಲ್ಲಿ ಸೌಮೇಂದು ಮುಖರ್ಜಿ ಅವರು ರಜೆ ಇರುವುದು ತನಿಖೆಗೆ ಇನ್ನಷ್ಟು ತಡವಾಗಲಿದೆ. ಇತ್ತೀಚೆಗೆ ಕೋಟ್೯ ನಲ್ಲಿ ಸಿಡಿ ಪ್ರಕರಣ ವಿಚಾರಣೆ ನಡೆದಿದ್ದು, ತನಿಖಾ ವರದಿಗೆ ಎಸ್ಐಟಿ ಮುಖ್ಯಸ್ಥರ ಸಹಿ ಇಲ್ಲದೇ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು.

ಇದನ್ನೂ ಓದಿ:ರೇಖಾ ಕದಿರೇಶ್ ಕೊಲೆ ಪ್ರಕರಣ : ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ

ಇದನ್ನು ಪರಿಶೀಲಿಸಿದ ಕೋಟ್೯ ತನಿಖಾ ತಂಡಕ್ಕೆ ತರಾಟೆಗೆ ತೆಗೆದುಕೊಂಡು ವಿಚಾರಣೆ ಮುಂದೂಡಿತು. ಇಂತಹ ಸನ್ನಿವೇಶವನ್ನು ಎಸ್ಐಟಿ ಎದುರಿಸಿದ್ದು, ಇದೀಗ ಸೌಮೇಂದು ಮುಖರ್ಜಿ ತನಿಖಾ ವರದಿ ಮತ್ತು ಕೋರ್ಟ್​ ಹೇಳಿಕೆ ನೀಡಲು ಕೋರ್ಟ್​ಗೆ ಹೋಗಲೇಬೇಕು. ಆದ್ದರಿಂದ ತನಿಖೆ ಇನ್ನೂ ಒಂದು ತಿಂಗಳು ನಡೆಯುವ ಸಾಧ್ಯತೆ ಹೆಚ್ಚಿದೆ.

Last Updated : Jun 30, 2021, 5:04 AM IST

ABOUT THE AUTHOR

...view details