ಬೆಂಗಳೂರು:ಸಿಬ್ಬಂದಿ ಹಾಗೂ ನೌಕರರಿಗಾಗಿ ನಮ್ಮ ಮೆಟ್ರೋ ಸಂಸ್ಥೆ ವತಿಯಿಂದ ನೂರು ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭಗೊಳಿಸಲಾಗಿದೆ.
ಸಿಬ್ಬಂದಿ, ನೌಕರರಿಗಾಗಿ ಬಿಎಂಆರ್ಸಿಎಲ್ ವತಿಯಿಂದ ಕೋವಿಡ್ ಕೇರ್ ಸೆಂಟರ್ ಆರಂಭ
ಬಿಎಂಆರ್ಸಿಎಲ್ ವತಿಯಿಂದ ಸಿಬ್ಬಂದಿ ಹಾಗೂ ನೌಕರರಿಗಾಗಿ ನೂರು ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಂದು 17 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಸಿಬ್ಬಂದಿ, ನೌಕರರಿಗಾಗಿ ಬಿಎಂಆರ್ಸಿಎಲ್ ವತಿಯಿಂದ ಸಿಸಿಸಿ ಸೆಂಟರ್ ಆರಂಭ
ನಗರದ ಹೊಸೂರು ಮುಖ್ಯ ರಸ್ತೆಯ ಕೂಡ್ಲು ಗೇಟ್ ಬಳಿಯ ಎಕ್ಕಾ ಹೋಟೆಲ್ನಲ್ಲಿ ಸಿಸಿಸಿ ಸೆಂಟರ್ ಆರಂಭವಾಗಿದೆ. ಸಿಸಿಸಿ ಸೆಂಟರ್‌ನಲ್ಲಿ ಅಗತ್ಯವಿರುವ ಔಷಧೋಪಚಾರ, ಆಮ್ಲಜನಕ ಹಾಗೂ ಪೌಷ್ಟಿಕ ಆಹಾರದ ವ್ಯವಸ್ಥೆಯನ್ನು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಮಾಡಿದ್ದಾರೆ. ಇಂದು 17 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಓದಿ:ಬೆಡ್ಗಾಗಿ ಸಿಎಂ ನಿವಾಸದೆದುರು ಗೋಗರೆದ ಸೋಂಕಿತನ ಪತ್ನಿ: ಆಸ್ಪತ್ರೆಗೆ ಹೋಗುವಾಗಲೇ ಹಾರಿಹೋಯ್ತು ಪ್ರಾಣ