ಬೆಂಗಳೂರು: ಮಾದಕ ವಸ್ತು ಖರೀದಿ ಹಾಗೂ ಮಾರಾಟ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಸಂಬಂಧಿಕರನ್ನು ಕರೆಯಿಸಿಕೊಂಡು ಸಿಸಿಬಿ ಹಿರಿಯ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿ ಶಂಕೆ: ಆರೋಪಿ ಸಂಬಂಧಿಕರ ಹೇಳಿಕೆ ದಾಖಲಿಸಿದ ಸಿಸಿಬಿ - ಮಾದಕ ವಸ್ತು ಖರೀದಿ ಹಾಗೂ ಮಾರಾಟ ದಂಧೆ ಪ್ರಕರಣ
ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ರವಿಶಂಕರ್ ಸಂಬಂಧಿಕರನ್ನು ಕರೆಯಿಸಿಕೊಂಡು ಸಿಸಿಬಿ ಹೇಳಿಕೆ ದಾಖಲಿಸಿಕೊಂಡಿದೆ.
ನಟಿ ರಾಗಿಣಿ ಆಪ್ತ ರccb records the statements of relativesಶಂಕರ್
ರವಿಶಂಕರ್ ಪತ್ನಿ ಅರ್ಚನಾ, ನಾದಿನಿಯರಾದ ಅಪೇಕ್ಷ ನಾಯಕ್, ಅಂಕಿತ ನಾಯಕ್ರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಿಸಿಬಿ ಕಲೆ ಹಾಕಿದೆ. ಈಗಾಗಲೇ ಬಂಧಿತರಾಗಿರುವ ಪ್ರತೀಕ್ ಶೆಟ್ಟಿ, ರವಿಶಂಕರ್ ನಾದಿನಿ ಜೊತೆ ಸಂಪರ್ಕದಲ್ಲಿದ್ದು, ಪಾರ್ಟಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಹಲವು ಸಾಕ್ಷ್ಯಾಧಾರವನ್ನು ಸಿಸಿಬಿ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು. ಹೀಗಾಗಿ, ನಿನ್ನೆ ಕೂಡ ಅಧಿಕಾರಿಗಳು ರವಿಶಂಕರ್ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದ್ದರು. ಇಂದು ಸಹ ಕರೆಯಿಸಿಕೊಂಡು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.