ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಓರ್ವ ಆರೋಪಿ ಬಂಧಿಸಿದ್ದಾರೆ.
ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಒಬ್ಬ ಅರೆಸ್ಟ್, ಇಬ್ಬರು ಯುವತಿಯರ ರಕ್ಷಣೆ - bengaluru latest news
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಯುವತಿಯರಿಬ್ಬರನ್ನು ರಕ್ಷಣೆ ಮಾಡಿದ್ದಾರೆ.
![ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಒಬ್ಬ ಅರೆಸ್ಟ್, ಇಬ್ಬರು ಯುವತಿಯರ ರಕ್ಷಣೆ Ccb raid on spa in bengaluru](https://etvbharatimages.akamaized.net/etvbharat/prod-images/768-512-9168188-thumbnail-3x2-sow.jpg)
ಕೊರೊನಾದ ನಡುವೆ ನಿಯಮಗಳನ್ನು ಮೀರಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಈಗಾಗಲೇ ನಗರದ ಹಲವೆಡೆ ದಾಳಿ ನಡೆಸುತ್ತಿದೆ. ದಕ್ಷಿಣ ವಿಭಾಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ಯದ್ ಯೂಸೂಫ್ ಎಂಬಾತ ಮೇಘಾಲಯ ಹಾಗೂ ಕೇರಳ ಮೂಲದ ಯುವತಿಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಸಿಲಿಕಾನ್ ಸಿಟಿಗೆ ಕರೆ ತಂದಿದ್ದ. ಬಳಿಕ ಯುವತಿಯರಿಗೆ ಹಣದ ಆಮೀಷವೊಡ್ಡಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ.
ಈ ಬಗ್ಗೆ ಖಚಿತ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ಯುವತಿಯರಿಬ್ಬರನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ದಂಧೆ ನಡೆಸುತ್ತಿದ್ದ ಯೂಸೂಫ್ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.