ಬೆಂಗಳೂರು: ಅವಧಿ ಮೀರಿದರೂ ಪಾರ್ಟಿ ನಡೆಸುತ್ತಿದ್ದ ಐಷಾರಾಮಿ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ಮುಂಜಾನೆ ದಾಳಿ ನಡೆಸಿದ್ದಾರೆ. ಹೆಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ನಲ್ಲಿ ಮುಂಜಾನೆ 3.30ರ ವರೆಗೂ ಎಣ್ಣೆ ಪಾರ್ಟಿ ನಡೆಯುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಪಾರ್ಟಿಯಲ್ಲಿ ತೊಡಗಿದ್ದ 64 ಯುವಕರು ಮತ್ತು 24 ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಲ್ಲಿ ಮುಂಜಾನೆವರೆಗೂ ಭರ್ಜರಿ ಪಾರ್ಟಿ: ನಶೆಯಲ್ಲಿದ್ದವರಿಗೆ ಸಿಸಿಬಿ ಶಾಕ್! - CCB Raid in bangalore
ಹೋಟೆಲ್ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ತೊಡಗಿದ್ದ 64 ಯುವಕರು ಮತ್ತು 24 ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.

ಕಾಮೆಟ್ ಹೋಟೆಲ್ ಮೇಲೆ ಸಿಸಿಬಿ ದಾಳಿ
ಹೋಟೆಲ್ ಮೇಲೆ ಸಿಸಿಬಿ ದಾಳಿ
ಇದನ್ನೂ ಓದಿ:ಬೆಂಗಳೂರಿನ ಬಾಲಕಿ ಮೇಲೆ ಎಂಟು ಜನರಿಂದ ಗ್ಯಾಂಗ್ ರೇಪ್.. ವಿಡಿಯೋ ರೆಕಾರ್ಡ್
ದಕ್ಷಿಣ ಆಫ್ರಿಕಾ ಮೂಲದ ಡೇನಿಯಲ್ ಎಂಬಾತ ಪಾರ್ಟಿ ಆಯೋಜಿಸಿದ್ದು, ಯುವಕರಿಗೆ 400 ರೂ. ಯುವತಿಯರಿಗೆ 300 ರೂ. ಪ್ರವೇಶ ಶುಲ್ಕ ನಿಗದಿಪಡಿಸಿಸಿದ್ದ. ದಾಳಿ ವೇಳೆ ಯಾವುದೇ ಮಾದಕ ಪದಾರ್ಥ ದೊರೆತಿಲ್ಲವಾದರೂ ವಶಕ್ಕೆ ಪಡೆದವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಹೋಟೆಲ್ ಮಾಲೀಕ ವೆಂಕಟೇಶ್ ಹಾಗೂ ಪಾರ್ಟಿ ಆಯೋಜಕ ಡೇನಿಯಲ್ ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದು, ಪರಿಶೀಲನೆ ಮುಂದುವರಿಸಲಾಗಿದೆ.
Last Updated : Apr 9, 2022, 2:27 PM IST