ಕರ್ನಾಟಕ

karnataka

ETV Bharat / city

ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ - ಪರಪ್ಪನ ಅಗ್ರಹಾರದಲ್ಲಿ ಅಪರಾಧ ಪ್ರಕರಣ

ಹಲವಾರು ಬಾರಿ ಕ್ರಮ ವಹಿಸಿದರೂ, ಜೈಲಿನಿಂದಲೇ ಅಪರಾಧ ಪ್ರಕರಣಗಳು ನಡೆಯುತ್ತಿರುವ ಕಾರಣದಿಂದ ಬೆಂಗಳೂರಿನ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ccb-raid-on-central-jail-bengaluru
ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಸಿಸಿಬಿ ದಾಳಿ

By

Published : Nov 30, 2021, 10:14 AM IST

ಪರಪ್ಪನ ಅಗ್ರಹಾರ(ಬೆಂಗಳೂರು):ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಮೇಲೆ‌ ಸಿಸಿಬಿ ದಾಳಿ ನಡೆಸಿದೆ. ಸಿಸಿಬಿ ಪ್ರಕರಣ ದಾಖಲಿಸಿ, ಕ್ರಮವಹಿಸಿದರೂ ಜೈಲಿನಿಂದಲೇ ಅನೇಕ ಅಪರಾಧ ಪ್ರಕರಣಗಳು ನಡೆಯುತ್ತಿರುವ ಕಾರಣದಿಂದ, ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ‌ ಅಡ್ಡೆಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತು ವ್ಯವಹಾರ ಮಾಡುತ್ತಿರುವ ಪಾತಕಿಗಳಿಗೆ ದಾಳಿ ತಕ್ಷಣದ ಎಚ್ಚರಿಕೆಯನ್ನಷ್ಟೇ ರವಾನಿಸಲಿದೆ. ಸಾಮಾನ್ಯವಾಗಿ ಪ್ರತಿ ದಾಳಿಯಲ್ಲಿ ಮೊಬೈಲ್, ಗಾಂಜಾ ಹಾಗೂ ಇತರ ವಸ್ತುಗಳು ಪತ್ತೆಯಾಗುತ್ತಿದ್ದವು. ಈಗಿನ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಜೈಲಿನ ಅಧಿಕಾರಿಗಳಿಗೂ ಸಾಕಷ್ಟು ಮುಜುಗರ ಉಂಟಾಗಿದೆ.

ಇದನ್ನೂ ಓದಿ:ಐಸಿಯುನಲ್ಲಿದ್ದ ಹಸುಗೂಸುವಿನೊಂದಿಗೆ ನರ್ಸ್ ವಿಡಿಯೋ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ABOUT THE AUTHOR

...view details