ಕರ್ನಾಟಕ

karnataka

ETV Bharat / city

ಆದಿತ್ಯ ಆಳ್ವ ಬಂಧನ: ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಿಸಿಬಿ - ಬೆಂಗಳೂರು

ಆಳ್ವಾ ನೀಡುವ ಹೇಳಿಕೆ ಮೇಲೆ ಹಲವರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಆದಿತ್ಯಾ ಆಳ್ವಾ ಬಂಧನದಿಂದ ಈತನ ಸಂಪರ್ಕದಲ್ಲಿದ್ದ ನಟ - ನಟಿಯರು, ಗಣ್ಯರು, ರಾಜಕಾರಣಿಗಳ ಮಕ್ಕಳಿಗೂ ನಡುಕ ಶುರುವಾಗಿದೆ‌‌.

ಆದಿತ್ಯ ಆಳ್ವ
ಆದಿತ್ಯ ಆಳ್ವ

By

Published : Jan 12, 2021, 10:38 AM IST

ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪಿಯಾಗಿ ಕಳೆದ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಪುತ್ರ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ ನಗರಕ್ಕೆ ಕರತಂದಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವೈದ್ಯಕೀಯ ಪರೀಕ್ಷೆ ಬಳಿಕ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆ ತರಲಿದ್ದಾರೆ. ಬಳಿಕ ಆದಿತ್ಯ ಆಳ್ವಾನನ್ನು ತೀವ್ರ ವಿಚಾರಣೆಗೊಳಪಡಿಸಲಿದ್ದಾರೆ. ಆದಿತ್ಯಾ ಆಳ್ವಾ ಬಂಧನದಿಂದ ಈತನ ಸಂಪರ್ಕದಲ್ಲಿದ್ದ ನಟ - ನಟಿಯರು, ಗಣ್ಯರು, ರಾಜಕಾರಣಿಗಳ ಮಕ್ಕಳಿಗೂ ನಡುಕ ಶುರುವಾಗಿದೆ‌‌.

ಇನ್ನು ಆಳ್ವಾ ನೀಡುವ ಹೇಳಿಕೆ ಮೇಲೆ ಹಲವರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹೆಬ್ಬಾಳದಲ್ಲಿರುವ ತನ್ನ ನಿವಾಸ " ಹೆವನ್ "ನಲ್ಲಿ ಪಾರ್ಟಿ ಮಾಡುತ್ತಿದ್ದ. ಅಲ್ಲದೇ ಡ್ರಗ್ ಪೆಡ್ಲರ್​ಗಳ ಮೂಲಕ ಡ್ರಗ್ಸ್ ತರಿಸುತ್ತಿದ್ದ. ವಿದೇಶಿ ಪೆಡ್ಲರ್ ಲೂಮ್‌ ಪೆಪ್ಪರ್ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ‌. ಹೀಗಾಗಿ ಆರೋಪಿ ಆದಿತ್ಯಾ ಆಳ್ವಾ ಮೇಲೆ ಕೇಸ್ ದಾಖಲಾಗಿತ್ತು.

ABOUT THE AUTHOR

...view details