ಬೆಂಗಳೂರು:ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ದರೋಡೆಗೆ ಸಂಚು ಹಾಕುತ್ತಿದ್ದ ನಾಲ್ವರು ರೌಡಿಗಳನ್ನ (Bengaluru Rowdies) ಬಂಧಿಸಲಾಗಿದೆ. ಅಯ್ಯಪ್ಪ, ಅಜಯ್ ಕುಮಾರ್, ಅಕ್ಷಯ್, ನವೀನ್ ಬಂಧಿತ ಆರೋಪಿಗಳು.
ಹೆಚ್ಎಎಲ್ ಠಾಣಾ ವ್ಯಾಪ್ತಿಯ ಎಲ್ಬಿಎಸ್ ನಗರದ ಬಳಿ ಅಪರಿಚಿತರಿಗೆ ಮಾರಕಾಸ್ತ್ರಗಳನ್ನ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.