ಕರ್ನಾಟಕ

karnataka

ETV Bharat / city

ಕಾವೇರಿ ವೆಬ್ ಸೈಟ್ ತಿರುಚಿದ ಆರೋಪ: ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಸಿಸಿಬಿ ದಾಳಿ‌‌ - ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಸಿಸಿಬಿ ದಾಳಿ‌‌

ರಾಜ್ಯ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟಾರ್​ಗಳು ಕಾವೇರಿ ವೆಬ್ ಸೈಟ್ ತಿರುಚಿ ಅಕ್ರಮ ಎಸಗಿದ್ದಾರೆ ಎಂದು‌ ಇಲಾಖೆಯ ಮಹಾ ನಿರೀಕ್ಷಕ ಡಾ.ಕೆ.ವಿ ತ್ರಿಲೋಕ್ ಚಂದ್ರ ದೂರು ನೀಡಿದ ಬೆನ್ನಲೇ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ದಾಸನಪುರ ಹಾಗೂ ಲಗ್ಗೆರೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಇಂದು ದಾಳಿ‌ ನಡೆಸಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಸಿಸಿಬಿ ದಾಳಿ‌‌

By

Published : Nov 2, 2019, 11:14 PM IST

ಬೆಂಗಳೂರು: ರಾಜ್ಯ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟಾರ್​ಗಳು ಕಾವೇರಿ ವೆಬ್ ಸೈಟ್ ತಿರುಚಿ ಅಕ್ರಮ ಎಸಗಿದ್ದಾರೆ ಎಂದು‌ ಇಲಾಖೆಯ ಮಹಾ ನಿರೀಕ್ಷಕ ಡಾ.ಕೆ.ವಿ ತ್ರಿಲೋಕ್ ಚಂದ್ರ ದೂರು ನೀಡಿದ ಬೆನ್ನಲೇ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ದಾಸನಪುರ ಹಾಗೂ ಲಗ್ಗೆರೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಇಂದು ದಾಳಿ‌ ನಡೆಸಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಸಿಸಿಬಿ ದಾಳಿ‌‌

ದಾಳಿಯಲ್ಲಿ ಮಹತ್ವದ ದಾಖಲಾತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಈವರೆಗೂ ಮುದ್ರಾಂಕ ಇಲಾಖೆಯ ಮುಖ್ಯ ಕಚೇರಿಯ ಐದು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಬ್ ರಿಜಿಸ್ಟ್ರಾರ್ ಕಚೇರಿಯ ಎರಡು ಸೇರಿ ಒಟ್ಟು ಏಳು ಕಂಪ್ಯೂಟರ್​ಗಳನ್ನು ವಶಕ್ಕೆ ಪಡೆದು ಸೈಬರ್ ಲ್ಯಾಬ್​ಗೆ ಕಳುಹಿಸಲಾಗಿದೆ. ಇಂದು ಎರಡು ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ‌‌ ನಡೆಸಲಾಗಿದ್ದು, ಮುಂದಿನ‌ ದಿನಗಳಲ್ಲಿ ಹಲವು ಉಪ‌ ನೋಂದಣಿ ಕಚೇರಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಸಿಸಿಬಿ ಡಿಸಿಪಿ ರವಿಕುಮಾರ್ ತಿಳಿಸಿದ್ದಾರೆ.

ಕಾವೇರಿ ಜಾಲತಾಣದಲ್ಲಿ ಆನ್​ಲೈನ್ ಮೂಲಕ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಕೃಷಿ ಜಮೀನು ಅಭಿವೃದ್ಧಿಪಡಿಸಿ ಭೂ ಪರಿವರ್ತನೆ ಮಾಡಿಕೊಳ್ಳದೆ ರೆವಿನ್ಯೂ ಸೈಟ್​ಗಳಾಗಿ ನೋಂದಣಿ ಮಾಡಿಕೊಳ್ಳುವುದು ಕಾನೂನು ಬಾಹಿರ. ರೆವಿನ್ಯೂ ಸೈಟ್​ಗಳನ್ನು ನೋಂದಣಿ ಮಾಡಲು ಅಕ್ರಮವಾಗಿ ದಾಖಲೆಗಳನ್ನು ಅಪ್​ಲೋಡ್ ಮಾಡುವುದಲ್ಲದೇ, ಕಾವೇರಿ ವೆಬ್ ಸೈಟ್​ಅನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ ಆರೋಪದಡಿ 11 ಮಂದಿ ಸಬ್ ರಿಜಿಸ್ಟ್ರಾರ್​ಗಳ ವಿರುದ್ಧ ತ್ರಿಲೋಕ್ ಚಂದ್ರ ಅವರು‌ ಅ.18 ರಂದು ನಗರ ಸೈಬರ್ ಠಾಣೆಗೆ ದೂರು ನೀಡಿದ್ದರು. 2018 ರ ಡಿ.7 ರಿಂದ 18 ರ ನಡುವೆ ಕಾವೇರಿ ವೆಬ್ ಸೈಟ್ ತಿರುಚಲಾಗಿದೆ. ಅನುಮಾನದ ಮೇರೆಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಎಸಗಿರುವುದು ಗೊತ್ತಾಗಿದೆ. ಈ ಮೂಲಕ ಕೋಟ್ಯಂತರ ರೂ.ತೆರಿಗೆ ವಂಚಿಸಿದ್ದಾರೆ‌‌‌ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣ ಸಂಬಂಧ 11 ಉಪ ನೋಂದಣಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದ್ದರೂ, ಈವರೆಗೆ ಯಾರು ಹಾಜರಾಗಿಲ್ಲ. ಅಲ್ಲದೇ ಇತ್ತ ಕಚೇರಿಗೂ ಬಾರದೆ ಹಾಗೂ‌ ಅತ್ತ ಮನೆಯಲ್ಲಿಯೂ ಇರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಂಧನ ಭೀತಿಯಿಂದ ತೆರೆಮರೆಯಲ್ಲೇ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುತೂಹಲ ಸಂಗತಿಯೆಂದರೆ ದೂರು ದಾಖಲಾಗಿರುವುದು 11 ಮಂದಿ ಅಧಿಕಾರಿಗಳ ಮೇಲಾದರೂ, ಇವರ ಜೊತೆಗೆ ಇನ್ನೂ ಏಳು ಉಪ ನೋಂದಣಿ ಅಧಿಕಾರಿಗಳು ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ‌ ಮೂಲಕ ಪ್ರಕರಣದಲ್ಲಿ ಏಳು ಮಂದಿ ಅಧಿಕಾರಿಗಳು ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಡೇಟಾ ಆಪರೇಟರ್​ಗಳ ಹೇಳಿಕೆ ಪಡೆದುಕೊಂಡ ಸಿಸಿಬಿ:

ಮಾದನಾಯಕನಹಳ್ಳಿ, ದಾಸರಹಳ್ಳಿ, ಲಗ್ಗೆರೆ ಮತ್ತು ಪೀಣ್ಯ ಸೇರಿದಂತೆ ವಿವಿಧ ಉಪ ನೋಂದಣಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ 40 ಡೇಟಾ ಆಪರೇಟರ್​ಗಳ ಹೇಳಿಕೆಯನ್ನು ಸಿಸಿಬಿ ಪಡೆದುಕೊಂಡಿದೆ. ಕಾವೇರಿ ವೆಬ್ ಸೈಟ್ ತಿರುಚಿರುವುದು ನಮಗೆ ಗೊತ್ತಿಲ್ಲ. ಯಾಕೆಂದರೆ ವೆಬ್ ಸೈಟ್ ಓಪನ್ ಮಾಡಬೇಕಾದರೆ ಪಾಸ್ ವರ್ಡ್ ಇರಬೇಕಾಗುತ್ತದೆ. ಸಬ್ ರಿಜಿಸ್ಟ್ರಾರ್ ಹೊರತುಪಡಿಸಿ ಇಂಜಿನಿಯರ್ ಬಳಿಯೇ ಈ ಪಾಸ್ ವರ್ಡ್ ಇರುತ್ತದೆ. ಹೀಗಾಗಿ ಪ್ರಕರಣದ ಬಗ್ಗೆ ನಮಗೇನು ಗೊತ್ತಿಲ್ಲ. ಹಿರಿಯ ಅಧಿಕಾರಿಗಳ ಅಣತಿಯಂತೆ ಕಾರ್ಯನಿರ್ವಹಿಸಿದ್ದೇವೆ ಎಂದು ಡೇಟಾ ಆಪರೇಟರ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details