ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ವಿನ್ ಅಲಿಯಾಸ್ ಬೂಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣ: ಅಶ್ವಿನ್ ಬೂಗಿ ಬಂಧಿಸಿದ ಸಿಸಿಬಿ ಪೊಲೀಸರು
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಬೂಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ನಾನು ಮತ್ತು ಅಶ್ವಿನ್ ಪಿಯುಸಿಯಿಂದಲೇ ಸ್ನೇಹಿತರು. ಪ್ರಕರಣದ 8ನೇ ಆರೋಪಿ ಅಭಿಸ್ವಾಮಿ ಕೂಡ ಬೂಗಿಗೆ ಆತ್ಮೀಯ ಸ್ನೇಹಿತನಾಗಿದ್ದ. ಡ್ರಗ್ಸ್ ಜಾಲಕ್ಕೆ ಬೂಗಿ ಕಾಲಿಡಲು ಅಭಿಸ್ವಾಮಿಯೇ ಬೂಗಿಗೆ ನೆರವು ನೀಡಿದ್ದ. ಅಭಿಸ್ವಾಮಿ ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಈತನ ಮೂಲಕ ನೈಜೀರಿಯನ್ ಪೆಡ್ಲರ್ಗಳ ಸಂಪರ್ಕ ಸಾಧಿಸಿದ್ದ ಬೂಗಿ, ಪೆಡ್ಲರ್ಗಳಿಂದ ಪಿಲ್ಸ್ ಮತ್ತು ಕೊಕೇನ್ ಪೌಡರ್ ಪಡೆಯುತ್ತಿದ್ದ ಎನ್ನಲಾಗ್ತಿದೆ. ನಂತರ ನನಗೆ ಡ್ರಗ್ಸ್ ನೀಡುತ್ತಿದ್ದ. ಕಾಟನ್ ಪೇಟೆಯಲ್ಲಿ ಪ್ರಕರಣ ದಾಖಲಾಗುವ ಮೊದಲು ನಾನು ಬೂಗಿ ಬಳಿ ಡ್ರಗ್ಸ್ ಕೇಳಿದ್ದೆ. ಈ ವೇಳೆ ಸ್ಟಾಕ್ ಖಾಲಿಯಾಗಿದ್ದ ಹಿನ್ನೆಲೆ, ಬೂಗಿ ನೈಜೀರಿಯನ್ ಪೆಡ್ಲರೊಬ್ಬನ ನಂಬರ್ ನೀಡಿದ್ದ. ಅವತ್ತು ಪೆಡ್ಲರ್ ಕೂಡ ನನಗೆ ಡ್ರಗ್ಸ್ ನೀಡಿಲ್ಲವೆಂದು ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.
ಅಶ್ವಿನ್ ಅಲಿಯಾಸ್ ಬೂಗಿ ಡ್ರಗ್ಸ್ ಪ್ರಕರಣದ 9ನೇ ಆರೋಪಿಯಾಗಿದ್ದು, ಈತ ನಟಿ ರಾಗಿಣಿ ಹಾಗೂ ಸಂಜನಾ ಜೊತೆ ಪಾರ್ಟಿ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗ್ತಿದೆ. ಸದ್ಯ ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದೆ.