ಕರ್ನಾಟಕ

karnataka

ETV Bharat / city

ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ: ಯುವರಾಜ್ ಬ್ಯಾಂಕ್​ ಲಾಕರ್ ತೆರೆದ ಸಿಸಿಬಿ - ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ

ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ ಮಾಡುತ್ತಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಇಂದು ಆರೋಪಿಯ ಹೆಸರಲ್ಲಿರುವ ಆಸ್ತಿ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳು ಕಲೆ‌ ಹಾಕುತ್ತಿದ್ದಾರೆ.

ಯುವರಾಜ್
ಯುವರಾಜ್

By

Published : Dec 23, 2020, 12:42 PM IST

ಬೆಂಗಳೂರು: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿಯ ಬ್ಯಾಂಕ್ ಅಕೌಂಟ್ ಲಾಕರ್ ಅನ್ನು ಸಿಸಿಬಿ ಅಧಿಕಾರಿಗಳು ಓಪನ್ ಮಾಡಿದ್ದಾರೆ.

ಯುವರಾಜ್, ಆತನ ಪತ್ನಿ ಪ್ರೇಮಾ ಹಾಗೂ ಮಗಳು ವೈಷ್ಣವಿ ಹೆಸರಲ್ಲಿ ಬಹಳಷ್ಟು ಹಣ ಮಾಡಿದ್ದಾನೆ ಎನ್ನಲಾಗಿತ್ತು. ಹೀಗಾಗಿ ಆತನ ಹೆಸರಲ್ಲಿರುವ ಆಸ್ತಿಯ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳು ಕಲೆ‌ ಹಾಕುತ್ತಿದ್ದಾರೆ.

ಆತ ಕರ್ನಾಟಕ ಬ್ಯಾಂಕ್​ನಲ್ಲಿ ಲಾಕರ್ ಹೊಂದಿದ್ದು, ಸಿಸಿಬಿ ಎಸಿಪಿ ನಾಗರಾಜ್ ನೇತೃತ್ವದಲ್ಲಿ ಇಂದು ಲಾಕರ್​ ಓಪನ್ ಮಾಡಿದ್ದಾರೆ. ಆದರೆ ಕರ್ನಾಟಕ ಬ್ಯಾಂಕ್​ ಲಾಕರ್​ ಖಾಲಿ ಇದ್ದು, ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಈ ಹಿನ್ನೆಲೆ ಇನ್ನೊಂದು ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಾಕರ್​ ಅನ್ನು ಸಹ ಓಪನ್ ಮಾಡಿದ್ದಾರೆ. ಅಲ್ಲಿಯೂ ಸಹ ಏನೂ ಸಿಗದೆ ಇರುವ ಕಾರಣ ಬ್ಯಾಂಕ್ ಅಕೌಂಟ್ ಮಾಹಿತಿ ಕಲೆಹಾಕುತ್ತಿದ್ದಾರೆ.

ಯುವರಾಜ್ ತನಿಖೆ ವೇಳೆ ಸುಳ್ಳು ಮಾಹಿತಿ ಹಾಗೂ ಸತ್ಯಾಸತ್ಯತೆ ಮರೆಮಾಚುತ್ತಿರುವ ಕಾರಣ ಸೆಕ್ಷನ್ 120b, 406, 419, 420, 506 ಅಡಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಜೊತೆಗೆ ಅಕ್ರಮ ಆಸ್ತಿ ಗಳಿಗೆ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ಸದ್ಯದಲ್ಲೇ ಈತನ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

ಓದಿ:ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಪ್ರಕರಣ: ಯುವರಾಜನ ಮತ್ತೊಂದು ಮುಖವಾಡ ಬಯಲು

ABOUT THE AUTHOR

...view details