ಕರ್ನಾಟಕ

karnataka

ETV Bharat / city

ಕೋರ್ಟ್​ನಲ್ಲಿ ಮೂವರು ಶಂಕಿತ ಉಗ್ರರ ವಿಚಾರಣೆ: ಹೆಚ್ಚಿನ ಮಾಹಿತಿಗೆ ಮತ್ತೆ ಸಿಸಿಬಿ ವಶಕ್ಕೆ - ಮತೀಯ ಗಲಭೆ ಸೃಷ್ಟಿ ಮಾಡಲು‌ ಸಂಚು ರೂಪಿಸಿದ್ದ ಆರೋಪಿಗಳ ವಿಚಾರಣೆ

ರಾಜ್ಯಗಳಲ್ಲಿ ಮತೀಯ ಗಲಭೆ ಸೃಷ್ಟಿ ಮಾಡಲು‌ ಸಂಚು ರೂಪಿಸಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸಿಸಿಬಿ ಪೊಲೀಸರು ಇಂದು ಎನ್​ಐಎ ಕೋರ್ಟ್​ಗೆ ಹಾಜರು ಪಡಿಸಿದ್ದರು. ಆದರೆ ಹೆಚ್ಚಿನ ವಿಚಾರಣೆ ಇರುವ ಹಿನ್ನಲೆ ಮೂವರನ್ನ ವಶಕ್ಕೆ ನೀಡುವಂತೆ ಮನವಿ ಮಾಡಲಾಯಿತು.

militants
ಶಂಕಿತ ಉಗ್ರ

By

Published : Jan 17, 2020, 9:22 PM IST

ಬೆಂಗಳೂರು: ರಾಜ್ಯಗಳಲ್ಲಿ ಮತೀಯ ಗಲಭೆ ಸೃಷ್ಟಿ ಮಾಡಲು‌ ಸಂಚು ರೂಪಿಸಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸಿಸಿಬಿ ಪೊಲೀಸರು ಇಂದು ಎನ್​ಐಎ ಕೋರ್ಟ್​ಗೆ ಹಾಜರು ಪಡಿಸಿದ್ದರು. ಆದರೆ ಹೆಚ್ಚಿನ ವಿಚಾರಣೆ ಇರುವ ಹಿನ್ನಲೆ ಮೂವರನ್ನ ವಶಕ್ಕೆ ನೀಡುವಂತೆ ಸಿಸಿಬಿ ಮನವಿ ಮಾಡಿತು.

ಮೂವರು ಆರೋಪಿಗಳಾದ ಮೆಹಬೂಬ್ ಪಾಷ, ಮೊಹಮದ್ ಮನ್ಸೂರ್, ಸಯ್ಯದ್ ಅಜ್ಮುತ್ತುಲ್ಲ ನ‌ನ್ನು ಸಿಸಿಬಿ ಪೊಲೀಸರು ಇಂದು ಎನ್​ಐಎ ಕೋರ್ಟ್​ಗೆ ಹಾಜರುಪಡಿಸಿದ್ದರು. ಆದರೆ ಹೆಚ್ಚಿನ ವಿಚಾರಣೆ ಇರುವ ಹಿನ್ನಲೆ ಮೂವರನ್ನ ವಶಕ್ಕೆ ನೀಡುವಂತೆ ಮನವಿ ಮಾಡಿದ್ರು. ಸಿಸಿಬಿ‌ ಮನವಿ ಆಲಿಸಿದ ನ್ಯಾಯಾಲಯ ಆರೋಪಿಗಳನ್ನು ಸಿಸಿಬಿ ವಶಕ್ಕೆ ನೀಡಿದೆ.

ಈ ಆರೋಪಿಗಳು ಕರ್ನಾಟಕ, ತಮಿಳುನಾಡಿನಲ್ಲಿ ಮತೀಯ ಗಲಭೆ, ವಿಧ್ವಂಸಕ ಕೃತ್ಯವೆಸಗಲು ಫ್ಲಾನ್ ಮಾಡಿದ್ದರು. ‌ಹೀಗಾಗಿ ಸಿಸಿಬಿ ಪೊಲೀಸರು ಆರೋಪಿಗಳ ಹೆಡೆ ಮುರಿ ಕಟ್ಟಿ, ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಮೆಹಬೂಬ್ ಪಾಷ ಪ್ರಮುಖ ಆರೋಪಿಯಾಗಿದ್ದು, ಈತನಿಂದ ಹಲವಾರು ಮಾಹಿತಿಗಳನ್ನ ಸಿಸಿಬಿ ಪಡೆಯಬೇಕಿದೆ. ಸಿಸಿಬಿ ವಿಚಾರಣೆ ನಡೆಸಿದ ನಂತ್ರ, ಬಾಡಿ ವಾರೆಂಟ್ ಮೂಲಕ ತಮಿಳುನಾಡು ಪೊಲೀಸರು ಕೂಡ ಆರೋಪಿಗಳನ್ನ ವಶಕ್ಕೆ ಪಡೆಯಲಿದ್ದಾರೆ.

ABOUT THE AUTHOR

...view details