ಬೆಂಗಳೂರು: ಹೈದರಾಬಾದ್‌ನ ಸಿಪಿಡಬ್ಲ್ಯೂಡಿ ಹಾಗೂ ಉತ್ತರ ಕನ್ನಡ(ಕಾರವಾರ)ದ ಹೊನ್ನಾವರ ಶ್ರೇಣಿಯ ಕೇಂದ್ರ ಅಬಕಾರಿ ಮತ್ತು ತೆರಿಗೆ (ಜಿಎಸ್‌ಟಿ) ವಿಭಾಗದ ಪ್ರತ್ಯೇಕ ಲಂಚ ಸ್ವೀಕಾರ ಪ್ರಕರಣದಲ್ಲಿ (ಸಿಬಿಐ) ಕೇಂದ್ರ ತನಿಖಾ ದಳದ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ (ಎಲೆಕ್ಟ್ರಿಕಲ್) ಪಿ.ಸಾಯಿ ಕೊಮರೇಶ್ವರ, ಹೊನ್ನಾವರ ಶ್ರೇಣಿಯ ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ) ಸೂಪರ್‌ಡೆಂಟ್ ಜಿತೇಂದ್ರ ಕೆ.ದಾಗೂರ್ ಬಂಧಿತ ಆರೋಪಿಗಳು.
ಪ್ರಕರಣ ಸಂಬಂಧ ಹೈದರಾಬಾದ್‌ನ ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಸಾಯಿ ಕೊಮರೇಶ್ವರ ವಿರುದ್ಧ ಲಂಚ ಸ್ವೀಕಾರ ಪ್ರಕರಣ ದಾಖಲಾಗಿತ್ತು. ಆರೋಪಿ, ಸಿಪಿಡಬ್ಲ್ಯೂಡಿಯ ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡಲು 60 ಸಾವಿರ(20 ಲಕ್ಷ ರೂ. ಬಿಲ್‌ನ ಶೇ.3ರಷ್ಟು ಲಂಚ) ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ದೂರುದಾರರಿಂದ 45 ಸಾವಿರ ರೂ ಪಡೆದಿದ್ದರು. ಎರಡನೇ ಕಂತಿನಲ್ಲಿ ಉಳಿದ 15 ಸಾವಿರ ರೂ. ಲಂಚದ ಮೊತ್ತವನ್ನು ದೂರುದಾರರಿಂದ ಪಡೆಯುವಾಗ ಸಿಬಿಐ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.