ಬೆಂಗಳೂರು: ವಿಡಿಯೋ ಗೇಮ್ಸ್ ಜೂಜು ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 5 ಮಂದಿಯನ್ನು ಬಂಧಿಸಿ 10 ಸಾವಿರ ರೂ. ಹಣ, 83 ವಿಡಿಯೋ ಗೇಮ್ ಯಂತ್ರಗಳು ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್ಕೆಬಿ ರಸ್ತೆಯ ರಂಖನಗರದ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ಸಾಯಿ ವಿನಾಯಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಅಸೋಸಿಯೇಷನ್‌ನಲ್ಲಿ ಐದಾರು ಮಂದಿ ಸೇರಿ ಹಣವನ್ನು ಪಣವಾಗಿಟ್ಟುಕೊಂಡು ವಿಡಿಯೋ ಗೇಮ್ಸ್ ಜೂಜಾಟ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.