ಕರ್ನಾಟಕ

karnataka

ETV Bharat / city

ಮಚ್ಚು, ಲಾಂಗು ಹಿಡಿದು ನಿಂತಿದ್ದ ಫೋಟೋ ಪೇಸ್​ಬುಕ್​ನಲ್ಲಿ ಪೋಸ್ಟ್​​: ಆರೋಪಿಗಳ ಬಂಧನ - ದರೋಡೆಕೋರರ ಬಂಧನ

ಕೆ.ಆರ್.ಪುರಂನಲ್ಲಿ ಗೆಳೆಯನ ಬರ್ತ್​ ಡೇ ಪಾರ್ಟಿ ಮಾಡಿ ಮದ್ಯ ಸೇವಿಸಿ ಲಾಂಗು, ಮಚ್ಚುಗಳ ಜೊತೆ ಸೆಲ್ಫಿ ತೆಗೆದುಕೊಂಡು ಫೇಸ್‍ಬುಕ್​​ನಲ್ಲಿ ಪೋಸ್ಟ್ ಮಾಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ccb-arrested-accused-who-were-planing-to-robbery
ಬೆಂಗಳೂರು ಸಿಸಿಬಿ

By

Published : Mar 7, 2020, 7:54 PM IST

ಬೆಂಗಳೂರು:ಮಾರಕಾಸ್ತ್ರ ಹಿಡಿದು ಫೇಸ್‍ಬುಕ್​​ನಲ್ಲಿ ಪೋಸ್ಟ್ ಮಾಡಿ ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಡಿ ಸುರೇಶ್, ನದೀಂ, ರಾಜೇಶ್, ಹನುಮಂತು ಎಂಬುವರನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕಳೆದ ವಾರ ಕೆ.ಆರ್.ಪುರಂನಲ್ಲಿ ಗೆಳೆಯನ ಬರ್ತ್​ ಡೇ ಪಾರ್ಟಿ ಮಾಡಿದ್ದ ಆರೋಪಿಗಳು, ಮದ್ಯ ಸೇವಿಸಿ ಲಾಂಗು, ಮಚ್ಚುಗಳ ಜೊತೆ ಸೆಲ್ಫಿ ತೆಗೆದುಕೊಂಡಿದ್ರು. ಬಳಿಕ ಫೇಸ್‍ಬುಕ್​​ನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ಬಂಧಿತರಿಂದ ಎರಡು ಲಾಂಗು, ಒಂದು ಕಬ್ಬಿಣದ ರಾಡ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details