ಬೆಂಗಳೂರು:ಮಾದಕ ವಸ್ತುವಿನ ವಿರುದ್ಧ ಸಮರ ಸಾರುತ್ತಿರುವ ಸಿಸಿಬಿ ಪೊಲೀಸರು, ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಪ್ರಜೆ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿ 1 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದಾರೆ.
6 ಆರೋಪಿಗಳನ್ನು ಬಂಧಿಸಿ, 1 ಕೋಟಿ ಮೌಲ್ಯದ ಡಗ್ಸ್ ಜಪ್ತಿ ಮಾಡಿದ ಸಿಸಿಬಿ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕೆರೆಯ ಮನೆಯೊಂದರಲ್ಲಿ ಡ್ರಗ್ಸ್ ಸಂಗ್ರಹಿಸಿ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಬಂಧಿತರಿಂದ ಮಾದಕ ವಸ್ತುಗಳಾದ 55 ಲಕ್ಷ ಮೌಲ್ಯದ 328 ಎಕ್ಸ್ ಟೆನ್ಸಿ ಫಿಲ್ಸ್ಗಳು, 200 ಗ್ರಾಂ ಎಂಡಿಎಂ ಮಾತ್ರೆಗಳು, 101 ಎಲ್ಎಸ್ಡಿ ಸ್ಟಿಪ್ಸ್ಗಳು, 5 ಮೊಬೈಲ್ ಫೋನ್, ಒಂದು ಕಾರು ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.
50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ
ಮತ್ತೊಂದು ಪ್ರಕರಣದಲ್ಲಿ ಅವ್ಯಾಹತವಾಗಿ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 50 ಲಕ್ಷ ಬೆಲೆ ಬಾಳುವ 330 ಗ್ರಾಂ ಕೋಕೇನ್, 20 ಎಂಡಿಎಂಎ, 45 ಯಾಬಾ, 113 ಎಕ್ಸ್ ಟೆನ್ಸಿ ಟ್ಯಾಬ್ಲೆಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದು ಅಕ್ರಮವಾಗಿ ನಗರದ ಬಾಗಲೂರಿನಲ್ಲಿ ನೆಲೆಸಿದ್ದ.. ತಮ್ಮದೇ ವ್ಯವಸ್ಥಿತ ಜಾಲದಿಂದ ಮಾದಕ ವಸ್ತು ಖರೀದಿಸಿ, ಮಾರಾಟ ಮಾಡಿ ಅಕ್ರಮ ಸಂಪಾದನೆಗೆ ದಾರಿ ಕಂಡುಕೊಂಡಿದ್ದ. ಖಚಿತ ಮಾಹಿತಿ ಆಧರಿಸಿ ಈತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, 50 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿಕೊಂಡಿದ್ದಾರೆ.
ಪ್ರತ್ಯೇಕ ಎರಡು ಪ್ರಕರಣಗಳ ಆರು ಮಂದಿ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಮತ್ತು ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ.