ಕರ್ನಾಟಕ

karnataka

ETV Bharat / city

ಐಎಂಎನಿಂದ ಹಣ ಪಡೆದ ಆರೋಪ: ಐಟಿ ಅಧಿಕಾರಿಗಳು ಸೇರಿ ಐವರ ಮನೆ ಮೇಲೆ ಸಿಬಿಐ ದಾಳಿ - ಐಟಿ‌ ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ

ರಾಜ್ಯದಲ್ಲಿ ತ್ರೀವ ಸಂಚಲನ ಮೂಡಿಸಿದ್ದ ಬಹುಕೋಟಿ ವಂಚನೆ ಎಸಗಿದ್ದ ಐಎಂಎ ಕಂಪನಿಗಳ ಮೇಲೆ ದಾಳಿ ನಡೆಸಿದ್ದ ಐಟಿ‌ ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

CBI raid
CBI raid

By

Published : Dec 30, 2019, 10:37 PM IST

ಬೆಂಗಳೂರು:ರಾಜ್ಯದಲ್ಲಿ ತ್ರೀವ ಸಂಚಲನ ಮೂಡಿಸಿದ್ದ ಬಹುಕೋಟಿ ವಂಚನೆ ಎಸಗಿದ್ದ ಐಎಂಎ ಕಂಪನಿಗಳ ಮೇಲೆ ದಾಳಿ ನಡೆಸಿದ್ದ ಐಟಿ‌ ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಾದ ಆಯೇಶ್ ಜೈನ್, ಕಿರಣ್ ಪಮೇದಿ ಮತ್ತು ಕೈಜಲ್ ಪಾಷಾ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು, ಕಾರವಾರ, ಹೊಸೂರು, ಸೇಲಂನಲ್ಲಿ ಸಿಬಿಐಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಐಎಂಎ ಸಮೂಹ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್​ನಿಂದ ಐಟಿ ಅಧಿಕಾರಿಗಳು ತೆರಿಗೆ ಸಂಗ್ರಹ ವೇಳೆ ಮನ್ಸೂರ್‌ಗೆ ಸಹಾಯ ಮಾಡಿದ್ದ ಆರೋಪ ಕೇಳಿಬಂದಿದೆ.‌ ಅಲ್ಲದೆ ಮನ್ಸೂರ್‌ನಿಂದ ಹಣ ಪಡೆದ ಆರೋಪ ಐಟಿ ಅಧಿಕಾರಿಗಳ ಮೇಲಿದೆ. ಹಾಗಾಗಿ ಸಿಬಿಐ ಈ ದಾಳಿ ನಡೆಸಿದೆ ಎನ್ನಲಾಗಿದೆ.

ABOUT THE AUTHOR

...view details