ಕರ್ನಾಟಕ

karnataka

ETV Bharat / city

ಯೋಗೀಶ್​ ಗೌಡ ಹತ್ಯೆ ಪ್ರಕರಣ: ಹಾವೇರಿ ಎಎಸ್ಪಿ ‌ಬಾಲದಂಡಿ ವಿಚಾರಣೆ ನಡೆಸಿದ ಸಿಬಿಐ - ಧಾರವಾಡದ ಜಿ.ಪಂ ಸದಸ್ಯ ಯೋಗೀಶ್​ ಗೌಡ ಹತ್ಯೆ

ಧಾರವಾಡದ ಜಿ.ಪಂ ಸದಸ್ಯ ಯೋಗೀಶ್​ ಗೌಡ ಹತ್ಯೆ ನಡೆದ ಅವಧಿಯಲ್ಲಿ ಎಎಸ್ಪಿ ‌ಬಾಲದಂಡಿ ಅವರು ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಇವರನ್ನು ವಿಚಾರಣೆ ನಡೆಸಿದರು.

Yogesh Gowda
Yogesh Gowda

By

Published : May 26, 2020, 5:53 PM IST

Updated : May 26, 2020, 6:18 PM IST

ಬೆಂಗಳೂರು: 2016 ಜೂನ್ 15 ರಂದು ಧಾರವಾಡದ ಜಿ.ಪಂ ಸದಸ್ಯ ಯೋಗೀಶ್​ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಎಎಸ್ಪಿಯನ್ನು ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಹತ್ಯೆ ನಡೆದ ಅವಧಿಯಲ್ಲಿ ಎಎಸ್ಪಿ ‌ಬಾಲದಂಡಿ ಅವರು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣಕ್ಕೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಬರುವಂತೆ ಬಾಲದಂಡಿ ಅವರಿಗೆ ನೋಟಿಸ್ ನೀಡಿದ್ದರು. ಹೀಗಾಗಿ ಬಾಲದಂಡಿ ವಿಚಾರಣೆಗೆ ಹಾಜರಾದರು.

‌ಈಗಾಗಲೇ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಅದರಲ್ಲಿ ಸ್ಥಳೀಯ ಪೊಲೀಸರು, ಕೆಲವು ಅಮಾಯಕರನ್ನು ಬಂಧಿಸಿದ್ದಾಗಿ ತಿಳಿಸಲಾಗಿದೆ. ಈ ಕುರಿತು, ಪ್ರಕರಣದಲ್ಲಿ ಅಮಾಯಕರನ್ನು ಅರೆಸ್ಟ್​ ಮಾಡಿದ್ದೀರಾ?, ಯಾಕೆ?, ಯಾರಾದರು ರಾಜಕಾರಣಿಗಳ ಕೈವಾಡ ಅಥವಾ ಒತ್ತಡ ಇತ್ತಾ? ಎಂಬ ಹಲವು ಪ್ರಶ್ನೆಗಳನ್ನು ಸಿಬಿಐ ಅಧಿಕಾರಿಗಳು ಎಎಸ್ಪಿ ಬಾಲದಂಡಿ ಅವರಿಗೆ ಕೇಳಿದ್ದಾರೆ. ಈ ಸಂಬಂಧ ಮತ್ತಷ್ಟು ಪೊಲೀಸರನ್ನು, ರಾಜಾಕಾರಣಿಗಳನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ‌.

Last Updated : May 26, 2020, 6:18 PM IST

ABOUT THE AUTHOR

...view details